ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲೊಂದು ವಿಡಿಯೋ ಅಥವಾ ಪೋಸ್ಟ್ ಗಳು ವೈರಲ್ ಆಗುತ್ತದೆ. ಇಂತಹ ವಿಡಿಯೋ ನೋಡಿ ಅದೆಷ್ಟು ಜನ ಹೊಸ- ಹೊಸ ಪ್ರಯತ್ನ ಕೂಡ ಮಾಡುವುದಕ್ಕೆ ಹೋಗುತ್ತಾರೆ. ಅದೇ ರೀತಿ ಇಲ್ಲೊಂದು ಜಿಲ್ಲೆಯಲ್ಲಿ ಅಂತಹದ್ದೆ ಒಂದು ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ವೈರಲ್ ಆಗಿತ್ತು. ಅದರಲ್ಲಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿ ಇಟ್ಟರೆ ಮತ್ತೆ ಬದುಕುತ್ತಾನೆ ಎಂದು ಬರೆಯಲಾಗಿತ್ತು. ಈ ಪೋಸ್ಟ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಹೌದು ಬಳ್ಳಾರಿಯಲ್ಲಿ ವೈರಲ್ ಆಗಿರುವ ಪೋಸ್ಟ್ ಸತ್ಯ ಅಂತ ಹೇಳಿ ಅದನ್ನ ನಂಬಿದ ಗ್ರಾಮಸ್ಥರು ಇತ್ತೀಚೆಗೆ ಬಾಲಕನೊಬ್ಬ ಮೃತಪಟ್ಟಾಗ ಇದೇ ರೀತಿ ಬದುಕುಳಿಸಲು ಪ್ರಯತ್ನ ಪಟ್ಟಿದ್ದಾರೆ. ನಾಲ್ಕು ತಾಸುಗಳ ಕಾಲ ಉಪ್ಪಿನಲ್ಲಿಟ್ಟಿದ್ದಾರೆ.
Laxmi News 24×7