Breaking News

ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

Spread the love

ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರಿಗೆ ತಾರತಮ್ಯ ಮಾಡಿದ ಆರೋಪದ ಮೇಲೆ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಬಡಿಸಿದ ಊಟವನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಡುಗೆಯವನ ಸೂಚನೆಯನ್ನು ಅನುಸರಿಸಿ ಊಟವನ್ನು ಎಸೆದಿದ್ದಾರೆ. ಈ ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಬಳಿಕ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ, ಅಡುಗೆಯವನ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಜನವರಿ 22ರಿಂದ ಜನವರಿ 31ರವರೆಗೆ ಜಂಟಿ ಅಧಿವೇಶನ, ನರೇಗಾ ಬಗ್ಗೆ ವಿಶೇಷ ಚರ್ಚೆ: ಸಿಎಂ

Spread the loveಬೆಂಗಳೂರು: ಜನವರಿ 22 ರಿಂದ ಜನವರಿ 31ರ ವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ಅಧಿವೇಶನದ ವೇಳೆ ನರೇಗಾ(MGNREGA) ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ