ಚಿತ್ರದುರ್ಗದ ಮುರುಘಾ ಶರಣರ (Murugha Shri) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಆಕ್ರೋಶ ಹೆಚ್ಚಾಗಿದೆ. ಮುರುಘಾ ಶ್ರೀ ಬಂಧನ (Arrest) ಆಗದ ಹಿನ್ನಲೆ ಪ್ರತಿಭಟನೆಗಳು (Protest) ನಡೆಯುತ್ತಿದೆ. ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಡಾ. ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ (Statue Collapse) ಮಾಡಲಾಗಿದೆ. ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ (Fire) ಹಾಕಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ. ಇದರ ನಡುವೆ ಮುರುಘಾಶ್ರೀಗಳಿಗೆ ನಿರೀಕ್ಷಣಾ ಜಾಮೀನು (Anticipatory Bail) ಸಿಕ್ಕಿದೆ. ಸೆಪ್ಟೆಂಬರ್ 1ಕ್ಕೆ ಶರಣರ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ. ಇದರ ನಡುವೆ ಮುರುಘಾ ಶ್ರೀಗಳಿಗೆ ಇತರ ಮಠಾಧೀಶರು ಧೈರ್ಯ ತುಂಬಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಅತ್ಯಾಚಾರ, ಪೋಕ್ಸೋ ಕೇಸ್ ಸಂಕಷ್ಟ ತಂದೊಡ್ಡಿದೆ. ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ವಿರುದ್ಧ ಆಕ್ರೋಶ ಹೆಚ್ಚಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ.
ಮುರುಘಾ ಶ್ರೀಗಳ ಪ್ರತಿಮೆ ಧ್ವಂಸ
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಮುರುಘಾ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮುರುಘಾ ಶ್ರೀಗಳ ಪ್ರತಿಮೆ ಧ್ವಂಸ ಮಾಡಲಾಗಿದೆ. ಅನಾಥ ಸೇವಾ ಆಶ್ರಮದಲ್ಲಿ ನಿರ್ಮಿಸಿದ್ದ ಪ್ರತಿಮೆಯನ್ನು ಧ್ವಂಸಗೊಳಿಸಿ ಪ್ರತಿಭಟನೆ ನಡೆಸಲಾಗ್ತಿದೆ.