Breaking News

ರಸ್ತೆಅಗೆದು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನ ವಿರುದ್ಧ ಸಾರ್ವಜನಿಕರ ಆಕ್ರೋಶ

Spread the love

ಚಿಕ್ಕೋಡಿ: ತನ್ನ ಜಮೀನಿನಲ್ಲಿ ಕಾಲುವೆ ನೀರು ಬರುತ್ತಿದೆ ಎನ್ನುವ ಕಾರಣಕ್ಕೆ ರಸ್ತೆಯನ್ನು ಅಗೆದು ಎರಡು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನೋರ್ವನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ರಸ್ತೆಯ ಪಕ್ಕದ ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಣ್ಣ ತೇಲಿ ಎಂಬಾತ ಸರ್ಕಾರದ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆಯನ್ನೆ ಅಗೆದು ಜನರಿಗೆ ತೊಂದರೆ ನೀಡುತ್ತಿದ್ದಾನೆ. ಇದರಿಂದ ರೋಸಿ ಹೋಗಿರುವ ಸಾರ್ವಜನಿಕರು ಬಿಜೆಪಿ ಮುಖಂಡನ ವಿರುದ್ಧ ಹರಿಹಾಯ್ದಿದ್ದಾರೆ.

ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ನೀರು ಪಾಸ್ ಆಗಲೆಂದು ಕೆಳಗೆ ಪೈಪ್ ಲೈನ್ ಅವಳವಡಿಸಿ ಮೇಲೆ ರಸ್ತೆ ಮಾಡಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ಹಾಕಿದ್ದರಿಂದ ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ರಸ್ತೆ ಅಗೆದು ತಮ್ಮಣ್ಣ ದರ್ಪ ಪ್ರದರ್ಶಿಸಿದ್ದಾನೆ. 


Spread the love

About Laxminews 24x7

Check Also

ಪಂಚಮಸಾಲಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಏಕ ಸದಸ್ಯ ಪಿಠದ ತನಿಖೆ ಆದೇಶ ಎತ್ತಿ ಹಿಡಿದ ಹೈಕೋರ್ಟ್

Spread the loveಚಿಕ್ಕೋಡಿ (ಬೆಳಗಾವಿ) : ಕಳೆದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ನಡೆಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ