ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2021ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರ ಹೆಸರನ್ನು ಪ್ರಕಟಿಸಿದೆ.
ಬಾಗಲಕೋಟೆಯ ಹಿರಿಯ ಕಲಾವಿದ ನಾಗಲಿಂಗಪ್ಪ ಗಂಗಪ್ಪ ಗಂಗೂರ (ಸಂಪ್ರದಾಯ ಶಿಲ್ಪ), ಉಡುಪಿಯ ರತ್ನಾಕರ ಎಸ್.
ಗುಡಿಗಾರ್ (ಸಂಪ್ರದಾಯ ಶಿಲ್ಪ), ಬಳ್ಳಾರಿಯ ಪಿ. ಮುನಿರತ್ನಾಚಾರಿ (ಸಂಪ್ರದಾಯ ಶಿಲ್ಪ), ಕಲಬುರಗಿಯ ಮಾನಯ್ಯ ನಾ. ಬಡಿಗೇರ (ಎರಕ ಶಿಲ್ಪ) ಹಾಗೂ ಬೆಂಗಳೂರಿನ ಬಿ.ಸಿ. ಶಿವಕುಮಾರ್ (ಸಮಕಾಲೀನ ಶಿಲ್ಪ) ಅವರು “ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ತಿಳಿಸಿದ್ದಾರೆ.
ಗೌರವ ಪ್ರಶಸ್ತಿ ತಲಾ 50 ಸಾವಿರ ರೂ. ಮತ್ತು ಸ್ಮರಣಿಕೆ, ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ತಲಾ 25 ಸಾವಿರ ರೂ. ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಜತೆಗೆ ಮೈಸೂರಿನ “ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಬಹುಮಾನ’ಕ್ಕೆ ಶಿವಮೊಗ್ಗದ ಅಜೇಯ್ ಗಜಾನನ ಅವರ ಮರದ ವಿಷ್ಣುವಿನ ಕಲಾಕೃತಿ ಭಾಜನವಾಗಿದೆ. “ಮನೋಹರ ಕಾಳಪ್ಪ ಪತ್ತಾರ ವಿಜಯಪುರ’ ಬಹುಮಾನಕ್ಕೆ ಬೆಂಗಳೂರಿನ ವಿನಯ್ ಕುಮಾರ್ ಎಸ್.ಅವರ ಫೈಬರ್ ಕಲಾಕೃತಿ ಆಯ್ಕೆ ಆಗಿದೆ.
“ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನ’ಕ್ಕೆ ವಿಜಯ ನಗರದ ಬಿ. ಮೌನೇಶ್ ಆಚಾರ್ ಅವರ ಮಹಿಷಾಸುರ ಮರ್ದಿನಿ ಕಲ್ಲಿನ ಕಲಾಕೃತಿ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಾರ್ಷಿಕ ಬಹುಮಾನ ವಿಜೇತರು
- ನರೇಶ್ ನಾಯ್ಕ, ಉಡುಪಿ ಜಿಲ್ಲೆ (ಕಲ್ಲು ಮಾಧ್ಯಮ)
- ಸುಮನ್ ಬಿ., ಮೈಸೂರು (ಕಲ್ಲು ಮಾಧ್ಯಮ)
- ಬಾಬುರಾವ್ ಎಚ್., ಕಲಬುರಗಿ (ವಿಶ್ರಮಾಧ್ಯಮ)
- ಎಸ್. ವೇಣುಗೋಪಾಲ್, ಮೈಸೂರು (ಕಲ್ಲು ಮಾಧ್ಯಮ