Breaking News

ಮಾಧ್ಯಮಗಳಲ್ಲಿ ಮುರುಘಾ ಶ್ರೀಗಳ ಬಂಧನದ ಕುರಿತು ಮಾಹಿತಿ ಬರುತ್ತಿವೆ. ಬಂಧನವಾಗಿದ್ದರೆ ನನಗೆ ಮಾಹಿತಿ ದೊರೆಯುತ್ತಿತ್ತು.:

Spread the love

ಹುಬ್ಬಳ್ಳಿ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೊಕ್ಸೊ ಪ್ರಕರಣದ ಅಡಿಯಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಂದಲೂ ಒತ್ತಡ ಬಂದಿಲ್ಲ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

 

ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಪೋಷಕರನ್ನು ಸಹ ಸಂಪರ್ಕಿಸಿದ್ದು, ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದೇವೆ. ಪೊಕ್ಸೊ ಕಾಯ್ದೆಯಡಿ ತನಿಖೆ ಮುಂದುವರಿದಿದೆ’ ಎಂದರು.

 

‘ಕೆಲವು ಮಾಧ್ಯಮಗಳಲ್ಲಿ ಮುರುಘಾ ಶ್ರೀಗಳ ಬಂಧನದ ಕುರಿತು ಮಾಹಿತಿ ಬರುತ್ತಿವೆ. ಬಂಧನವಾಗಿದ್ದರೆ ನನಗೆ ಮಾಹಿತಿ ದೊರೆಯುತ್ತಿತ್ತು. ಆದರೆ, ಈವರೆಗೆ ಅಂತಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಧ್ಯಮಗಳಿಗೆ ಅರ್ಧ ಮಾಹಿತಿಯನ್ನು ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ತನಿಖಾ ಹಂತದಲ್ಲಿ ಯಾವುದೇ ಮಾಹಿತಿ ನೀಡಬಾರದು ಎಂದು ಕೋರ್ಟ್ ಆದೇಶ ಸಹ ಇದೆ’ ಎಂದು ಹೇಳಿದರು.


Spread the love

About Laxminews 24x7

Check Also

ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್​ಗೆ ಜೋಶಿ ಪ್ರಶ್ನೆ

Spread the loveಧಾರವಾಡ, ಆಗಸ್ಟ್​ 02: ಲೋಕಸಭಾ ಚುನಾವಣೆಯ (Loksabha Election) ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಮತಗಳ್ಳನ’ ಆಗಿದೆ ಎಂಬ ಕಾಂಗ್ರೆಸ್​ ನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ