Breaking News

ನನ್ನ ವಿರುದ್ಧ ಮುರುಘಾ ಮಠದ ಒಳಗಡೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗಡೆ ನಡೆಯುತ್ತಿದೆ ಎಂದು ಮರಾಧೀಶ ಡಾ. ಶಿವಮೂರ್ತಿ ಶರಣರು

Spread the love

ಚಿತ್ರದುರ್ಗ: ನನ್ನ ವಿರುದ್ಧ ಮುರುಘಾ ಮಠದ ಒಳಗಡೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗಡೆ ನಡೆಯುತ್ತಿದೆ ಎಂದು ಮರಾಧೀಶ ಡಾ. ಶಿವಮೂರ್ತಿ ಶರಣರು ಸೋಮವಾರ ಹೇಳಿದರು.

ಲೈಂಗಿಕ ಕಿರುಕುಳ ಪ್ರಕರಣ ಹಿನ್ನೆಲೆಯಲ್ಲಿ ಮಠದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇನು ಹೊಸದಲ್ಲ, ಕಳೆದ 15 ವರ್ಷದಿಂದ ನಡೆಯುತ್ತಿದೆ.

ನಮ್ಮ ಮಠ ನ್ಯಾಯ ದೇಗುಲದಂತಿತ್ತು. ಇದೀಗ ಮಠದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದರು.

ಈ ನೆಲದ ಕಾನೂನು ಎಲ್ಲರಿಗೂ ಒಂದೇ , ಕಾನೂನನ್ನು ಗೌರವಿಸೋಣ ಎಂದ ಶ್ರೀಗಳು, ಯಾವುದೇ ಕಾರಣಕ್ಕೂ ಪಲಾಯನವಾದ ಇಲ್ಲ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲುಪ್ರಯತ್ನಿಸಲಾಗುವುದು, ಎಲ್ಲರೂ ಹೋರಾಡುವ ಮೂಲಕ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು, ಶೀಘ್ರದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಬರುತ್ತೇನೆ ಎಂದು ಅವರು ಹೇಳಿದರು.

ಭಕ್ತಾಧಿಗಳು ಯಾವುದೇ ಕಾರಣಕ್ಕೂ ಆತಂಕಪಡಬೇಕಾಗಿಲ್ಲ, ಯಾವುದೇ ಊಹಾಪೋಗಳಿಗೆ ಕಿವಿಗೂಡಬಾರದು. ಏನೋ ಒಂದು ಅಹಿತಕರ ಸಂದರ್ಭ ಎದುರಾಗಿದೆ. ಅದನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳೋಣ, ಕಷ್ಟ ಸಂದರ್ಭದಲ್ಲಿ ಹೊರಗ ಬರೋಣ ಎಂದು ಭಕ್ತರಿಗೆ ವಿಶ್ವಾಸ ತುಂಬಿದರು.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ