Breaking News

ಸ್ನಾನ ಮಾಡಲು ಹೋದ ಯುವಕ ಕಾಲುಜಾರಿ ನೀರುಪಾಲು

Spread the love

ಥಣಿ: ತಾಲ್ಲೂಕಿನ ಹಲ್ಯಾಳ ದೂರು ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಶುಕ್ರವಾರ ಸ್ನಾನ ಮಾಡಲು ಹೋದ ಯುವಕ ಕಾಲುಜಾರಿ ನದಿ ನೀರಿನಲ್ಲಿ ತೇಲಿಹೋಗಿದ್ದಾರೆ.

ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ನೀರುಪಾಲಾದ ಯುವಕ.

ದೇವರ ಪೂಜೆಗೆ ನದಿಯಿಂದ ನೀರು ಒಯ್ಯಲು ಬಂದಿದ್ದರು. ಸ್ನಾನ ಮಾಡಿ ಹೋಗಬೇಕು ಎಂದು ನದಿಗೆ ಇಳಿದರು. ಮರಳಿ ಬಂದಿಲ್ಲ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರು. ದೋಣಿ ಮೂಲಕ ರಾತ್ರಿಯೂ ಹುಡುಕಾಟ ನಡೆದಿತ್ತು.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ