Breaking News

ಪ್ರಶ್ನೆಪತ್ರಿಕೆ ಸೋರಿಕೆ ಮಾಡದೇ ಒಎಂಆರ್ ಶೀಟ್ ತಿದ್ದಲು ಸಂಚು!; ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣ

Spread the love

ಬೆಂಗಳೂರು :ಪೊಲೀಸ್ ಸಬ್​ಇನ್​ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ವೇಳೆ ಕೇಂದ್ರ ಸ್ಥಾನದಿಂದಲೇ ಪ್ರಶ್ನೆಪತ್ರಿಕೆ ಲೀಕ್ ಮಾಡಲು ಪ್ಲಾಯನ್ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭಯದಿಂದ ಪ್ಲಾಯನ್-ಬಿ ಒಎಂಆರ್ ಶೀಟ್ ತಿದ್ದುವುದನ್ನು ಫೈನಲ್ ಮಾಡಲಾಗಿತ್ತು.

 

ಪೊಲೀಸ್ ನೇಮಕಾತಿ ವಿಭಾಗದ ಹಿಂದಿನ ಎಡಿಜಿಪಿ ಅಮೃತ್ ಪೌಲ್ ಮತ್ತು ಡಿವೈಎಸ್​ಪಿ ಶಾಂತಕುಮಾರ್ ನಡುವೆಯೇ ಪ್ಲ್ಯಾನ್​-ಎ ಮತ್ತು ಬಿ ಬಗ್ಗೆ ರಹಸ್ಯ ಚರ್ಚೆ ನಡೆದಿತ್ತು. ಆನಂತರ ಉಳಿದವರನ್ನು ಅವರ ಕೆಲಸಕ್ಕೆ ತಕ್ಕಂತೆ ಕಮಿಷನ್ ಮಾತನಾಡಿ ಜವಾಬ್ದಾರಿ ವಹಿಸಲಾಗಿತ್ತು. ಈ ಎಲ್ಲ ಸಂಗತಿ, ಸಿಐಡಿ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಬಯಲಾಗಿದೆ. ಬಂಧಿತ ಶಾಂತಕುಮಾರ್, ಸ್ವಇಚ್ಛ ಹೇಳಿಕೆಯಲ್ಲಿ ಇದನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ನೇಮಕಾತಿ ವಿಭಾಗದ ಎಫ್​ಡಿಎ ಹರ್ಷ, ಮೊದಲ ಬಾರಿಗೆ ಅಕ್ರಮ ಎಸಗುವ ಬಗ್ಗೆ ಶಾಂತಕುಮಾರ್ ಬಳಿ ಪ್ರಸ್ತಾಪಿಸಿದ್ದ. ಅದಕ್ಕೆ ಶಾಂತಕುಮಾರ್, ಮೊದಲು ಎಡಿಜಿಪಿ ಒಪ್ಪಿಗೆ ಪಡೆಯುತ್ತೇನೆ ಎಂದಿದ್ದರು. ಅದರಂತೆ ಅಮೃತ್ ಪೌಲ್ ಬಳಿ ವಿಷಯ ಹೇಳಿದಾಗ ಸ್ವಲ್ಪ ದಿನ ಇರಿ. ಹೆಚ್ಚಿಗೆ ಅಭ್ಯರ್ಥಿಗಳ ಅಕ್ರಮ ನೇಮಕ ಬೇಡ. 15ರಿಂದ 17 ಜನರನ್ನು ಫಿಕ್ಸ್ ಮಾಡಿ ತಲಾ 30ರಿಂದ 35 ಲಕ್ಷ ರೂ. ಸಂಗ್ರಹಿಸಿ 5 ಕೋಟಿ ರೂ. ತಲುಪಿಸಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದರು. ಜತೆಗೆ ವಾಟ್ಸ್​ಆಪ್ ಕರೆ ಮತ್ತು ನೇರ ಭೇಟಿ ಮಾಡಿ ಡೀಲ್ ಮುಗಿಸಿ ಕಾಲ್ ಮಾಡಬೇಡಿ ಎಂದು ಎಚ್ಚರಿಸಿದ್ದರು. ಅದರಂತೆ ಹರ್ಷನನ್ನು ಕರೆದು ಡಿವೈಎಸ್​ಪಿ ವಿಷಯ ಮುಟ್ಟಿಸಿದ್ದರು. 5 ಕೋಟಿ ರೂ. ಎಡಿಜಿಪಿಗೆ ಕೊಟ್ಟರೇ ಮುಗಿತು. 4-5 ಅಭ್ಯರ್ಥಿಗಳನ್ನು ಹೆಚ್ಚಿಗೆ ಬುಕ್ ಮಾಡು. ಅದರಲ್ಲಿ ಬಂದ ಹಣ ಕಮಿಷನ್ ಆಗಲಿದೆ ಎಂದು ಸೂಚಿಸಿದ್ದರು.

ಕೊನೆಗೆ 26 ಅಭ್ಯರ್ಥಿಗಳ ಹೆಸರು, ವಿಳಾಸ ಸಂಗ್ರಹಿಸಿ ಡೀಲ್ ಕುದುರಿಸಿದ್ದರು. ಈ ಎಲ್ಲರೂ ದೇಹಾದಾರ್ಢ್ಯ ಪರೀಕ್ಷೆಯಲ್ಲಿಯೂ ಪಾಸ್ ಆಗಿದ್ದರು. ಲಿಖಿತ ಪರೀಕ್ಷೆ ಒಂದು ವಾರ ಇರುವಾಗ ಎಡಿಜಿಪಿ ಮತ್ತು ಡಿವೈಎಸ್​ಪಿ ಗೌಪ್ಯ ಸಭೆ ನಡೆಸಿದ್ದರು. ಬುಕ್ ಆಗಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯುವ ಮುನ್ನ ರಾತ್ರಿ ಪ್ರಶ್ನೆಪತ್ರಿಕೆ ಲೀಕ್ ಮಾಡುವ ವಿಷಯವನ್ನು ಶಾಂತಕುಮಾರ್ ಪ್ರಸ್ತಾಪಿಸಿದ್ದರು. ಅದಕ್ಕೆ ಎಡಿಜಿಪಿ, ಒಪ್ಪದೆ ‘ಯಾರನ್ನು ನಂಬಲು ಸಾಧ್ಯವಿಲ್ಲ. ಅಭ್ಯರ್ಥಿಗಳು ಜಾಲತಾಣದಲ್ಲಿ ವೈರಲ್ ಮಾಡಿದರೆ ತೊಂದರೆ ಆಗಲಿದೆ. ಬೇರೆ ಮಾರ್ಗದಿಂದ ಅಭ್ಯರ್ಥಿಗಳಿಗೆ ಅನುಕೂಲದ ಪ್ಲಾಯನ್ ಮಾಡಿ’ ಎಂದು ಹೇಳಿದ್ದರು.

ಎರಡು ದಿನ ಆದಮೇಲೆ ಪ್ಲ್ಯಾನ್​-ಬಿ ಯೋಜನೆ ಮಾಡಿದ ಶಾಂತಕುಮಾರ್, ಎಡಿಜಿಪಿ ಬಳಿಗೆ ಹೋಗಿ ಒಎಂಆರ್ ಶೀಟ್ ತಿದ್ದುವ ಪ್ಲಾಯನ್ ಹೇಳಿದ್ದರು. ಈ ಪ್ರಕಾರ, ಅಭ್ಯರ್ಥಿಗಳಿಗೆ 10ಕ್ಕೂ ಅಧಿಕ 20ಕ್ಕಿಂತ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿ ಬರುವಂತೆ ಸೂಚಿಸುವುದು. ಆನಂತರ ಸ್ಟ್ರಾಂಗ್ ರೂಮ್ಲ್ಲಿ ಅಭ್ಯರ್ಥಿಗಳ ಬಳಿ ಕಾರ್ಬನ್ ಶೀಟ್ ಮತ್ತು ಪೆನ್ ಪಡೆದು ಒಎಂಆರ್ ಶೀಟ್​ನಲ್ಲಿ ಇಟ್ಟು ಉತ್ತರಿಸುವುದನ್ನು ಹೇಳಿದ್ದರು. ಇದಕ್ಕೆ ಎಡಿಜಿಪಿ ಒಪ್ಪಿ ಕಾರ್ಯಗತ ಸಹ ಮಾಡಿದ್ದರು.

ಏನಿದು ಪ್ಲ್ಯಾನ್​-ಬಿ?: ಪತ್ರಿಕೆ-2ನಲ್ಲಿ 10ಕ್ಕಿಂತ ಹೆಚ್ಚು 20ಕ್ಕಿಂತ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ. ಎಷ್ಟು ಪ್ರಶ್ನೆಗಳನ್ನು ಪ್ರಯತ್ನಿಸಿದ್ದೆನೆ ಎಂಬ ಕಾಲಂನಲ್ಲಿ 1 ಅಥವಾ 17 ಬರೆಯಬೇಕು. ಒಎಂಆರ್ ಶೀಟ್ ಸ್ಟ್ರಾಂಗ್ ರೂಮ್ೆ ಬಂದ ಮೇಲೆ ಅಭ್ಯರ್ಥಿಗಳ ಬಳಿ ಇರುವ ಕಾರ್ಬನ್ ಶೀಟ್, ಪೆನ್ ಪಡೆದು ಅದನ್ನೇ ಬಳಸಿ ತಿದ್ದುವುದು. ಈ ಸಮಯದಲ್ಲಿ ಸಿಸಿ ಕ್ಯಾಮರಾ ಆಫ್ ಮತ್ತು ಡಿವಿಆರ್ ನಾಶ ಮಾಡುವುದು. ವಾಪಸ್ ಕಾರ್ಬನ್, ಪೆನ್ ಅಭ್ಯರ್ಥಿಗಳಿಗೆ ತಲುಪಿಸುವುದು.

ಒನ್​ಟೈಮ್ ಬಾಕ್ಸ್ ಸಹ ಟ್ಯಾಂಪರ್: ಉತ್ತರ ಪತ್ರಿಕೆಗಳನ್ನು ಸಂಗ್ರಹಿಸುವ ಒನ್​ಟೈಮ್ ಲಾಕ್ ಒಳಗೊಂಡ ಬಾಕ್ಸ್​ಗಳನ್ನು ಹೊಸದಾಗಿ ಪರಿಚಯಿಸುವುದರ ಬಗ್ಗೆ ಎಡಿಜಿಪಿಗೆ ಯುಟ್ಯೂಬ್​ನಲ್ಲಿ ವಿಡಿಯೋ ತೋರಿಸಿದ ಶಾಂತಕುಮಾರ್, ಟ್ಯಾಂಪರ್ ಮಾಡುವ ಬಗ್ಗೆ ತಿಳಿಸಿದ್ದರು. ಅಮೃತ್ ಪೌಲ್ ಒಪ್ಪಿದ ಮೇಲೆ ಅಹಮದಾಬಾದ್​ನ ಎಡ್ಯುಟೆಸ್ಟ್ ಸಲ್ಯೂಷನ್ ಪ್ರೖೆ.ಲಿ.ನಿಂದ ಒನ್​ಟೈಮ್ ಲಾಕ್​ಗಳನ್ನು ಖರೀದಿಸಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ