ನಿವೃತ್ತ ಸರ್ಕಾರಿ ನೌಕರರೋರ್ವರ ಬಳಿಯಿದ್ದ ೪ ಲಕ್ಷ ರೂಪಾಯಿಯನ್ನು ದೋಚಿ ಅವರನ್ನು ಅಪಹರಿಸಿ ಮತ್ತೆ ೨೦ ಲಕ್ಷ ಬೇಡಿಕೆಯಿಟ್ಟಿದ್ದ ಐವರನ್ನು ಬೆಳಗಾವಿ ಹಿರೇಬಾಗೇವಾಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದೇ ಆಗಸ್ಟ್ ೨೧ ರಂದು ಬೆಳಗಾವಿಯ ಮುತ್ನಾಳ ಗ್ರಾಮದ ರಾಷ್ಟಿçÃಯ ಹೆದ್ದಾರಿ ೦೪ ರಲ್ಲಿ ಸಂಚರಿಸುತ್ತಿದ್ದ ಅರಣ್ಯ ಇಲಾಖೆಯ ನಿವೃತ್ತ ಅಧೀಕ್ಷಕಯೋರ್ವರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ೪ ಲಕ್ಷ ರೂಪಾಯಿಯನ್ನು ದೋಚಲಾಗಿತ್ತು. ಅಲ್ಲದೇ ಅವರನ್ನು ಅಪಹರಿಸಿ ಇನ್ನು ೨೦ ಲಕ್ಷ ರೂಪಾಯಿಯ ಬೇಡಿಕೆ ಇಡಲಾಗಿತ್ತು.
ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಬೆಳಗಾವಿ ಗ್ರಾಮೀನ ಉಪವಿಭಾಗದ ಎಸಿಪಿ ಎಸ್ ವಿ ಗಿರೀಶ ಅವರ ಮಾರ್ಗದರ್ಶನದಲ್ಲಿ ಪಿಐ ವಿಜಯಕುಮಾರ ಸಿನ್ನೂರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಳಗಾವಿ ಛತ್ರಪತಿ ಶಿವಾಜೀ ನಗರದ ಮೂಲ ಗುಟಗುದ್ದಿಯ ರಹವಾಸಿ ಲಗಮಪ್ಪ ಕೊಳ್ಯಾನಾಯಿಕ(೩೦),
ಮುತ್ಯಾನಟ್ಟಿಯ ದುರ್ಗಮ್ಮಾ ಗಲ್ಲಿಯ ರಹವಾಸಿ ಪ್ರಕಾಶ ಗೋರವ(೨೬), ಮುತ್ಯಾನಟ್ಟಿಯ ಮಾರುತಿ ಗಲ್ಲಿಯ ರಹವಾಸಿ ಕಲ್ಲಪ್ಪ ಹೊನ್ನಂಗಿ (೨೯) , ಮಾಸ್ತಮರಡಿಯ ವಿಠ್ಠಲ ಗಲ್ಲಿಯ ರಹವಾಸಿ ಮಾರುತಿ ಬರ‍್ರಾಣಿ (೨೦) ಮತ್ತು ಮುತ್ಯಾನಟ್ಟಿ ದುರ್ಗಮ್ಮ ಗಲ್ಲಿಯ ರಹವಾಸಿ ವಿಶಾಲ ತಳವಾರ (೨೩) ನನ್ನು ಬಂಧಿಸಲಾಗಿದೆ.