ಹುಬ್ಬಳ್ಳಿ: ಖಾಸಗಿ ಬಸ್ ಹಾಗೂ ಕ್ರೂಜರ್ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ.
ಮೃತರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಿ ನಿವಾಸಿಗಳು ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರು. ಆಸ್ಪತ್ರೆಯಲ್ಲಿ ಕ್ರೂಜರ್ ಚಾಲಕ ಮಾರುತಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿಯೇ ಮೃತಪಟ್ಟವರನ್ನು ಶಿವನಗೌಡ ಮತ್ತು ಅಮೃತ ಎಂದು ಗುರುತಿಸಲಾಗಿದೆ. ಕ್ರೂಜರ್ ನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು.
ಇವರು ಹುಬ್ಬಳ್ಳಿಗೆ ಮೃತ ದೇಹವನ್ನು ತರಲು ಹೊರಟಿದ್ದರು. ಕಲಘಟಗಿಯ ರಾಯನಾಳ ಬಳಿ ಸೀ ಬರ್ಡ್ ಬಸ್ ಡಿಕ್ಕಿಯಾಗಿತ್ತು