ಗದಗ: ಜಿಲ್ಲೆಯಲ್ಲಿ ಹುಡ್ಕೋ ಕಾಲೋನಿಯ ಸಿಕಂದರ್ ಬಡೆಖಾನ್ ಕುಟುಂಬಸ್ಥರಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪೂಜೆ ನೆರೆವೇರಿಸಿದೆ. ಈ ವೇಳೆ ಸ್ವರೂಪಾನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕ್ಯಾರಕೊಪ್ಪದ ಓಂಕಾರ ಆಶ್ರಮದ ಸ್ವರೂಪನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ. ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್ ಅವರು ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ. ಪಾದಪೂಜೆಯ ಮೂಲಕ ಸ್ವಾಮೀಜಿಯವರು ಬಡೆಖಾನ್ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ.ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.