ವರನಟ, ಅಪ್ಪಾಜಿ ಹಾಗೂ ಕನ್ನಡದ ಕಣ್ಮನಿ ಎಂದು ಕರುನಾಡ ಇತಿಹಾಸ ಪ್ರಸಿದ್ಧವಾಗಿರುವ ಮೂರನೇ ಪುತ್ರ ಪವರ್ ಸ್ಟಾರ್ ಎಂದು ಜನಮನ್ನಣೆ ಪಡೆದಿದ್ದ ಪುನೀತ್ ರಾಜ್‍ಕುಮಾರ್. ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ 10 ತಿಂಗಳು ಕಳೆಯುತ್ತ ಬಂದರು ಅವರ ನೆನಪುಗಳು ಮಾತ್ರ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಮಾಸುತ್ತಿಲ್ಲ.
ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪುಸುತ್ತಿದೆ. ಅವರ ಮನೋಜ್ಞ ಅಭಿನಯದಿಂದ ಕರುನಾಡ ಮನೆ ಮನೆಗಳಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ವಿಶಿಷ್ಟ ಅಭಿನಯ ಕುಟುಂಬ ಸಮೇತ ನೋಡುವ ಚಿತ್ರಗಳು ಈಗಲೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.
ಪ್ರತಿ ಹಬ್ಬ ಸಮಾರಂಭಗಳಲ್ಲಿ ಪುನೀತ್ ರಾಜ್‍ಕುಮಾರ್ ಈಗಲೂ ರಾರಾಜಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ಲಾಲ್ ಭಾಗನಲ್ಲಿ ಪುಷ್ಪಗಳ ಮೂಲಕ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರೆ, ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಗಣೇಶ್ ಮೂರ್ತಿಗಳು ಭಾರಿ ಬೇಡಿಕೆ ಪಡೆಯುತ್ತಿವೆ.
ವಿವಿಧ ಹಾಗೂ ವಿಶಿಷ್ಟ ರೀತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಜೊತೆಗೆ ಗೌರವ ಕೂಡ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ಮಣ್ಣಿನ ಗಣೇಶನ ಪ್ರತಿಮೆಯ ಕಲಾವಿದ ವಿಜಯ್ ಕುಮಾರ್ ಕಾಂಬಳೆ ಪುನೀತ್ ರಾಜ್‍ಕುಮಾರ್ ಅವರ ಗಣಪತಿ ಮೂರ್ತಿಗಳನ್ನು ತಯಾರಿಸುವುದರ ಮೂಲಕ ಅವರಿಗೆ ಶ್ರದ್ಧಾಂಜಲಿ ಹಾಗೂ ಗೌರವ ಸಲ್ಲಿಸುತ್ತಿದ್ದಾರೆ.