ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮನೆಯ ಮಗುವಿಗೆ ಶ್ರೀಕೃಷ್ಣನ ವೇಶವನ್ನು ಹಾಕಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಸಾರಿದ ಅರ್ಥಪೂರ್ಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹೌದು ಭಾರತದಂಥ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಕಂಡುಬಂದ ಅದ್ಭು ದೃಶ್ಯವಿದು. ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯ ಚಿಕ್ಕ ಮಗುವಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲ ಶ್ರೀ ಕೃಷ್ಣನ ವೇಷವನ್ನು ಹಾಕಿ ಸಂಭ್ರಮಿಸಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಿದ್ದಾರೆ. ಬೆಳಗಾವಿಯ ಸದಾಶಿವ ನಗರ ಇಂಥದ್ದೊಂದು ಅದ್ಭುತ ಘಟನೆಗೆ ಇಂದು ಸಾಕ್ಷಿಯಾಗಿದೆ.
ಸದಾಶಿವ ನಗರದಲ್ಲಿರುವ ಮೊಕಾಶಿ ಎಂಬ ಮುಸ್ಲಿಂ ಕುಟುಂಬ ಹಿಂದೂ-ಮುಸ್ಲಿಂ ಬೇಧ-ಭಾವ ಮಾಡದೇ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮೆನಯಲ್ಲಿನ ಚಿಕ್ಕ ಮಗುವಿಗೆ ಶ್ರೀ ಕೃಷ್ಣನ ವೇಶ ಹಾಕಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಮುದ್ದು ಬಾಲ ಕೃಷ್ಣನಂತೆ ತಮ್ಮ ಮಗುವನ್ನು ಅಲಂಕಾರ ಮಾಡಿ ಕೈಗೆ ಕೊಳಲನ್ನು ನೀಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇನ್ನು ಈ ಬಾಲಕನ ಫೋಟೊಗಳು ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.