ಮಡಿಕೇರಿಯಲ್ಲಿ ಸಿದ್ದರಾಮಯ್ಯನವರ ಮೇಲಿನ ಮೊಟ್ಟೆ ಎಸೆದ ಘಟನೆ ಪೂರ್ವನಿಯೋಜಿತ. ಇದರಲ್ಲಿ ಸ್ಥಳೀಯ ಪ್ರಭಾವೀ ನಾಯಕರು ಇದ್ದಾರೆ. ಈ ಕುರಿತಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇದರ ಹಿಂದೆ ಜಿಲ್ಲೆಯ ಬಿಜೆಪಿ ನಾಯಕರ ಪ್ರಚೋದನೆ ಇದ್ದೇ ಇರುತ್ತದೆ. ಪ್ರಭಾವೀ ನಾಯಕರು ಹಾಗೂ ಸ್ಥಳೀಯ ನಾಯಕರು ಇದ್ದೇ ಇರುತ್ತಾರೆ. ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಬಂದಾಗ ಭದ್ರತಾ ಲೋಪ ಎಂದು ಸರಕಾರದ ಮೇಲೆ ಆರೋಪ ಮಾಡಿದರು. ಇವರ ಅಧಿಕಾರದಲ್ಲಿ ಪ್ರತೀ ದಿವಸ ಆಗುತ್ತದೆ. ಪ್ರತಿದಿನ ಲೋಪಗಳು ಆಗೇ ಆಗುತ್ತವೆ. ಅವನ್ನು ಸರಿಪಡಿಸಿ ಜನರಿಗೆ ಭದ್ರತೆಯನ್ನು ಒದಗಿಸುವ ಕಾರ್ಯ ಮಾಡಬೇಕು ಎಂದರು.
ಇದೇ ವೇಳೆ ಬಿಜೆಪಿ ಹಿಡನ್ ಅಜಂಡಾ ಕುರಿತಂತೆ ಮಾತನಾಡಿದ ಅವರು,ಗೋಡ್ಸೆ ಹಾಗೂ ಸಾವರ್‌ಕರ್‌ರ ವಿಚಾರಗಳನ್ನು ಮುಂದಿಟ್ಟುಕೊಂಡು ಅವರು ತಮ್ಮ ಅಜೆಂಡಾವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಒಳಗೊಳಗೇ ತಮ್ಮ ಅಜಂಡಾವನ್ನು ಹಂತ ಹಂತವಾಗಿ ಹೇರುತ್ತಾರೆ. ಕರ್ನಾಟಕ ಸರಕಾರದವರು ನೆಹರು ಫೋಟೊವನ್ನು ತೆಗೆದುಹಾಕಿದ್ದಾರೆ. ಅವರು ಗೋಡ್ಸೆ, ಸಾವರ್‌ಕರ್‌ರವರ ಫೋಟೋಗಳನ್ನೇ ಹಾಕುತ್ತಾರೆ. ಈ ಕುರಿತಂತೆ ನಾವು ಜನರಿಗೆ ಹೇಳುತ್ತಲೇ ಇದ್ದೇವೆ ಎಂದರು.
ಇದೇ ವೇಳೆ ಮುಸ್ಲಿಂ ಏರಿಯಾಗಳಲ್ಲಿ ಸಾವರ್‌ಕರ್ ಫೋಟೋ ಹಾಕುವ ಕುರಿತಂತೆ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.ಯಾವುದೇ ಏರಿಯಾದಲ್ಲಿ ನಿರ್ದಿಷ್ಟ ಫೋಟೋ ಹಾಕಬರದೆಂಬ ನಿರ್ಭಂಧವಿಲ್ಲ. ಆ ರೀತಿ ಯಾವುದೇ ನಿರ್ಭಂಧ ಇರಬಾರದು. ಯಾಕೆಂದ್ರೆ ಈ ದೇಶ ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಫೋಟೋಗಳನ್ನು ಹಾಕಲು ಸಮಾನವಾದ ಅವಕಾಶಗಳನ್ನು ನೀಡಲಾಗಿದೆ. ಮಡಿಕೇರಿ ಘಟನೆ ಪೂರ್ವನಿಯೋಜಿತವಾದುದು.