ಚಿಕ್ಕೋಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ವೇಳೆ ಚಿಕ್ಕೋಡಿ ತಾಲೂಕಾಡಳಿತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮರೆತಿದ್ದ ಹಿನ್ನಲೆ ದಲಿತ ಸಂಘಟನೆಗಳು ತಾಲೂಕಾಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕೋಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಸಂದರ್ಭ ಚಿಕ್ಕೋಡಿ ತಾಲೂಕಾಡಳಿತ ಮಹಾತ್ಮಾ ಗಾಂಧೀಜಿಯವರ ಒಂದೇ ಪೋಟೋ ಇಟ್ಟು ಯಡವಟ್ಟು ಮಾಡಿಕೊಂಡಿದೆ.
ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಬಿಟ್ಟು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮಾಡುತ್ತಿದ್ದ ಸಂಧರ್ಭ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಂದು ಅಚಾತುರ್ಯದಿಂದ ಬಿಟ್ಟು ಹೋಗಿದೆ, ತಪ್ಪು ತಿಳಿದುಕೊಳ್ಳಬಾರದು ಎಂದು ಕ್ಷಮಾಪಣೆ ಕೇಳಿ ಬಳಿಕ ಎಸಿ ಸಂತೋಷ ಕಾಮಗೌಡರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.