ಹೊಸದಿಲ್ಲಿ: ಭಾರತದ ಸ್ವಾತ್ರಂತ್ಯೋತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ ಇಲಾಖೆ) ಹೊಸ ಆಫರ್ ನೀಡಿದೆ.
ಇಂಡಿಯಾ ಪೋಸ್ಟ್ ಮೂಲಕ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲು ಇಲಾಖೆ ಮುಂದಾಗಿದೆ.
ಜಿಎಸ್‌ಟಿ ಶುಲ್ಕವಿಲ್ಲದೆ ಈ ಧ್ವಜವನ್ನು ಖರೀದಿಸಬಹುದಾಗಿದೆ.
ಅಲ್ಲದೆ, ತಮ್ಮ ವೆಬ್‌ಸೈಟ್‌ನಲ್ಲಿ ಖರೀದಿಸಲಾಗುವ ಈ ಧ್ವಜವನ್ನು ಯಾವುದೇ ವಿತರಣಾ ಶುಲ್ಕ ಇಲ್ಲದೇ (ಡಿಲಿವರಿ ಚಾರ್ಜಸ್) ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುವುದು ಎಂದು ಇಲಾಖೆ ಹೇಳಿದೆ.
ಇದಲ್ಲದೆ, ಅಂಚೆ ಕಚೇರಿಗಳಲ್ಲಿ ರಾಷ್ಟ್ರೀಯ ರಜಾ ದಿನದಂದೂ ಧ್ವಜ ಮಾರಾಟ ಇರುತ್ತದೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ “ಇಂಡಿಯಾ ಪೋಸ್ಟ್’ ಹೇಳಿದೆ.
Laxmi News 24×7