Breaking News

ಶಿರಡಿ ಸಾಯಿಬಾಬಾಗೆ ಭಕ್ತ 100 ಗ್ರಾಂ ತೂಕದ ಬಂಗಾರದ ಕೊಳಲು ಸಮರ್ಪಿಸಿದ್ದಾರೆ.

Spread the love

ಮಹಾರಾಷ್ಟ್ರ): ಮಹಾರಾಷ್ಟ್ರದ ಅಹ್ಮದ್​​ ನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ಶಿರಡಿ ಸಾಯಿಬಾಬಾಗೆ ದೆಹಲಿ ಮೂಲದ ಭಕ್ತರೊಬ್ಬರು ಚಿನ್ನದ ಕೊಳಲು ಅರ್ಪಿಸಿ ತಮ್ಮ ಭಕ್ತಿಯನ್ನು ಮರೆದಿದ್ದಾರೆ. ಅಂದಾಜು 100 ಗ್ರಾಂ ತೂಕದ ಈ ಬಂಗಾರದ ಕೊಳಲು 4.85 ಲಕ್ಷ ರೂ. ಬೆಲೆ ಬಾಳುತ್ತದೆ.

ದೆಹಲಿಯ ರಿಷಬ್ ಲೋಹಿಯಾ ಎಂಬುವವರೇ ಶಿರಡಿ ಸಾಯಿಬಾಬಾಗೆ ಚಿನ್ನದ ಕೊಳಲು ಅರ್ಪಿಸಿರುವ ಭಕ್ತರು. ತಮ್ಮ ಕುಟುಂಬದ ಸಮೇತ ಶಿರಡಿಗೆ ಬಂದು ಇದನ್ನು ದೇವರಿಗೆ ಸಮರ್ಪಿಸಿದ್ದಾರೆ. ಸಾಯಿ ಬಾಬಾ ನಮಗೆ ಶ್ರೀಕೃಷ್ಣನ ಅವತಾರದಂತೆ ಕಾಣಿಸುತ್ತಾರೆ. ಶ್ರೀಕೃಷ್ಣನಿಗೆ ಕೊಳಲು ಪ್ರಿಯವಾದ ವಸ್ತು. ಹೀಗಾಗಿಯೇ ಸಾಯಿಬಾಬಾಗೆ ಚಿನ್ನದ ಕೊಳಲು ಸಮರ್ಪಿಸಿದ್ದೇವೆ ಎಂದು ಭಕ್ತ ರಿಷಬ್​ ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಹುಲ್‌ ಸದಸ್ಯತ್ವ ರದ್ದುಗೊಳಿಸಿ – ಬಿಜೆಪಿಯಿಂದ ಪ್ರಸ್ತಾಪ ಸಲ್ಲಿಕೆ

Spread the loveನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ  ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ