ಹುಬ್ಬಳ್ಳಿ: ಸದ್ಯ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನನಗೆ ಪಕ್ಷದ ವರಿಷ್ಠರು ಕರೆ ಮಾಡಿ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಈ ರೀತಿಯಾಗಿ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.
ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ಆಗಿಲ್ಲ. ಆದರೆ, ಆ ಕಾರ್ಯಕ್ರಮದಿಂದ ಕಾಂಗ್ರೆಸ್ಗೆ ಸೈಡ್ ಎಫೆಕ್ಟ್ ಆಗಿದೆ. ರಾಹುಲ್ ಗಾಂಧಿ ಹೇಳಿದ ಮೇಲೆ ಡಿಕೆಶಿ ಸಿದ್ದು ಅವರನ್ನು ತಬ್ಬಿಕೊಂಡಿದ್ದಾರೆ.
ಪ್ರೀತಿ ಮತ್ತು ಅಭಿಮಾನ ಒತ್ತಾಯದಿಂದ ಬರೋದಿಲ್ಲ. ವೇದಿಕೆ ಮೇಲೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನ್ಯಾಚ್ಯೂರಲ್ ಆಗಿರಲಿಲ್ಲ. ಅವರಿಬ್ಬರೂ ಆರ್ಟಿಫಿಷಿಯಲ್ ಆಗಿದ್ದರು ಎಂದು ಟೀಕಿಸಿದರು.
Laxmi News 24×7