ಸಾರ್ವಜನಿಕರು ಸರಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿದ್ದರಿಂದ ನಮ್ಮ ಮನೆಯ ಮುಂದೆ ಮಳೆ ನೀರು ನಿಂತು ಮನೆಯೊಳಕ್ಗಕೆ ನೀರು ನುಗ್ಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಿ ಎಂದು ನೆಹರು ನಗರ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಹೀಗೆ ನೀರು ನಿಂತಿರುವುದನ್ನು ನೋಡಿ ಇದು ಕೆರೆ ಅಂದುಕೊಂಡದರೆ ನಿಮ್ಮ ಭಾವನೆ ತಪ್ಪು. ಇದು ಬೆಳಗಾವಿಯ ನೆಹರು ನಗರದ ರಾಮದೇವ್ ಹೊಟೇಲ್ ಹಿಂದಿನ ರಸ್ತೆಯಿದು.
ಸರ್ವಾಜನಿಕರು ಇಲ್ಲಿನ ಸರಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿದ್ದಾರೆ. ಇದರಿಂದ ಹರಿದು ಹೋಗಬೇಕಾದ ನೀರು ರಸ್ತೆಯ ಮೇಲೆಯೇ ನಿಂತಿದೆ. ಇದರಿಂದ ಇಲ್ಲಿನ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.
ಇನ್ನು ಮಳೆ ಹೆಚ್ಚಾಗಿ ಇಲ್ಲಿ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗುತ್ತಿದೆ. ಹಾಗಾಗಿ ಇಲ್ಲಿನ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ಕೂಡಲೇ ಪರಿಹಾರ ಮಾಡಿಕೊಡಬೇಕೆಂದು ಇಲ್ಲಿನ ಸಾರ್ವಜನಿಕರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.
Laxmi News 24×7