Breaking News

ಜಪಾನ್‌ ದೇಶದಲ್ಲೂ ಕನ್ನಡಿಗ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಹವಾ ಜೋರು..!

Spread the love

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ಸಿನಿಮಾ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

ಅದ್ರಲ್ಲೂ ಜಪಾನ್‌ ದೇಶದಲ್ಲಿ ‘ವಿಕ್ರಾಂತ್‌ ರೋಣ’ ಹವಾ ಜೋರಾಗಿದ್ದು, ಸದ್ಯದಲ್ಲೇ ಜಪಾನ್‌ ಭಾಷೆಗೂ ಡಬ್‌ ಆಗಿ ‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಲಿದೆ.

ಈಗಾಗಲೇ ₹150 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ಸುದೀಪ್‌ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಎಂಟ್ರಿಯಾದ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ ‘ವಿಕ್ರಾಂತ್‌ ರೋಣ’ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ