ಅವರು ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರ್ಷಕ್ಕೊಮ್ಮೆ ಗಣೇಶೋತ್ಸವ ಹಬ್ಬ (Ganesha Festival 2022) ಬರುತ್ತದೆ. ಎಲ್ಲರೂ ಏಕತೆ ಮೂಡಿಸುವ ಹಬ್ಬ ಇದಾಗಿದೆ. ಅದರಲ್ಲೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿದರಿಂದ ಎಲ್ಲರಲ್ಲೂ ಒಗ್ಗಟ್ಟು ಮೂಡುತ್ತದೆ. ಆದ್ರೆ ಸರ್ಕಾರದ ನಿಬಂಧನೆಗಳಿಂದ ತೊಂದರೆ ಆಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿದ್ಯುತ್, ಪೆಂಡಾಲ್, ಸ್ಪೀಕರ್, ಪೋಲಿಸ್ ಸ್ಟೇಷನ್, ಕಾರ್ಪೊರೇಷನ್ ಹಾಗೂ ಅಗ್ನಿಶಾಮಕ ದಳ ಪರವಾನಿಗೆ ಸಹ ಪಡೆಯಬೇಕಿದೆ. ಇದು ಎಷ್ಟೊಂದು ಕಿರಿಕಿರಿ ಆಗುತ್ತಿದೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೇನೆ ಎಂದು ಕಿಡಿಕಾರಿದರು.
ಒಂದೇ ಕಡೆ ಅನುಮತಿ ನೀಡಿ
ಕರ್ನಾಟಕ ಒನ್ ಅಂತಾ ಸರ್ಕಾರ ಮಾಡಿದೆ. ಎಲ್ಲ ಬಿಲ್‌ಗಳನ್ನು ಒಂದೇ ಕಡೆ ತುಂಬುವ ಪ್ರಕ್ರಿಯೆ ಇದರಲ್ಲಿದೆ. ಅದೇ ಮಾದರಿಯಲ್ಲಿ ಗಣೇಶೋತ್ಸವಕ್ಕೆ ಒಂದೇ ಕಡೆ ಅನುಮತಿ ಕೊಡಬೇಕು. ಒಂದೇ ಕಡೆಗೆ ಅನುಮತಿ ವ್ಯವಸ್ಥೆ ಮಾಡಬೇಕು, ಸುಮ್ಮನೆ ಓಡಾಡಿಸುವುದು, ಸುತ್ತಾಡಿಸುವುದು ಬಿಡಬೇಕು ಎಂದರು.