Breaking News

ಬೈಕಲ್ಲಿ ಇಬ್ಬರು ಪುರುಷರ ಪ್ರಯಾಣ ನಿಷೇಧ: ನಾಳೆಯಿಂದ ಹೊಸ ನಿಯಮ!

Spread the love

ಒಂದೇ ಬೈಕಲ್ಲಿ ಇಬ್ಬರು ಪುರುಷರು ಪ್ರಯಾಣಿಸುವಂತಿಲ್ಲ ಎಂದುಮಂಗಳೂರುಕಾನೂನು ಸುವ್ಯವಸ್ಥೆ ಪೊಲೀಸರು ಆದೇಶ ಹೊರಡಿಸಿದ್ದು, ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಮಂಗಳೂರು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಕರಾವಳಿಯಲ್ಲಿ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ನಿಯಮ ನಾಳೆಯಿಂದ ಅಂದರೆ ಆಗಸ್ಟ್‌ ೫ರಿಂದ ಜಾರಿಗೆ ಬರಲಿದೆ ಎಂದರು.

 

ನಾಳೆಯಿಂದ ಒಂದು ವಾರ ಕಾಲ ಈ ನಿಯಮ ಜಾರಿಗೆ ಬರಲಿದ್ದು, ದ್ವಿಚಕ್ರವಾಹನದ ಹಿಂಬದಿಯಲ್ಲಿ ಪುರುಷ ಸಿಬ್ಬಂದಿ ಪ್ರಯಾಣಿಸುವಂತಿಲ್ಲ. ಆದರೆ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ನಿಯಮ ಜಾರಿಗೆ ತರಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಮಾದರಿಯ ಕಾನೂನು ಜಾರಿಗೆ ತರಲಾಗಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಲೋಕ್‌ ಕುಮಾರ್‌ ವಿವರಿಸಿದರು.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ