Breaking News

ಭೂ ಹಗರಣ ಪ್ರಕರಣ: ಸಂಜಯ್ ರಾವತ್ ಇ.ಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ

Spread the love

ಮುಂಬೈ: ಪಟ್ರಾ ಚಾವ್ಲ್ ಭೂ ಪುನರ್ ಅಭಿವೃದ್ಧಿ ಪ್ರಕರಣ ಮತ್ತು ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಶಿವಸೇನಾ ಹಿರಿಯ ಮುಖಂಡ ಸಂಜಯ್ ರಾವತ್ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ.

 

ಇಂದು ರಾವತ್ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನಂತರ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ದುರುಪಯೋಗ ಆರೋಪದಡಿ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ಭಾನುವಾರ ಮಧ್ಯರಾತ್ರಿ ಬಂಧಿಸಿತ್ತು.

ಬಳಿಕ ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಹಾಜರುಪಡಿಸಿ, ಎಂಟು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಕೋರಿತ್ತು. ಆದರೆ ನ್ಯಾಯಾಧೀಶರಾದ ಎಂಜಿ ದೇಶಪಾಂಡೆ, ಆಗಸ್ಟ್ 4ರವರೆಗೆ ರಾವತ್ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದರು.


Spread the love

About Laxminews 24x7

Check Also

ಆಮೆಗತಿಯ ಕಾಮಗಾರಿ…ಕೆಸರುಮಯವಾದ ರಸ್ತೆ… ಓಡಾಡಲಾಗದೇ ಎಲ್ ಆಂಡ್ ಟಿ ಗೆ ಹಿಡಿಶಾಪ ಹಾಕಿದ ಜನ!!

Spread the love ಆಮೆಗತಿಯ ಅಭಿವೃದ್ಧಿ ಕಾಮಗಾರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಜನರು ಪ್ರತಿದಿನ ಇನ್ನಿಲ್ಲದ ಸಮಸ್ಯೆಯನ್ನು ಎದುರಿಸುತ್ತಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ