ಕುಂದಾನಗರಿ ಬೆಳಗಾವಿಯಲ್ಲಿ ಇಂದು ಸಾಯಂಕಾಲ ಮಳೆಯ ಆರ್ಭಟ ಜೋರಾಗಿದ್ದು. ಸತತ ಎರಡು ಘಂಟೆಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಹೈರಾಣಾದರು.
ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಏಕಾಏಕಿ ಮಳೆಯ ಆರ್ಭಟಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದರು.
ಸತತ ಎರಡು ಗಂಟೆಗಳಿಂದ ನಿರಂತರ ಮಳೆ ಆದರಿಂದ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಯ್ತು. ಇನ್ನು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಡೇಬಜಾರ್‍ಗೆ ಹೋಗುವ ರಸ್ತೆ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿತ್ತು. ಇದರಿಂದ ಜನರು ಓಡಾಡಲು ತೀವ್ರ ಪರದಾಡಿದರು.
Laxmi News 24×7