Breaking News

ಸಿಲಿಂಡರ್‌ ಅಗ್ಗ; 1100 ರೂ ಸಿಲಿಂಡರ್‌ ಕೇವಲ 587 ರೂ.ಗೆ ಸಿಗುತ್ತಾ?

Spread the love

ಬೆಲೆ ಏರಿಕೆಯಿಂದ ದಿನನಿತ್ಯವು ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನಿಗೆ ದಿನನಿತ್ಯದ ಬೆಲೆಗಳು ಬೇಸರ ಮೂಡಿಸಿವೆ. ಜೀವನವನ್ನು ನಡೆಸಲು ತೀವ್ರ ಕಷ್ಟವನ್ನು ಅನುಭವಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಬಹುದು ಎಂಬುವುದಕ್ಕೆ ಗ್ಯಾಸ್‌ ಬೆಲೆಯಲ್ಲಿ ಮತ್ತೆ ಬದಲಾವಣೆ ಆಗಲಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.

ಹೌದು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್ ಬೆಲೆಯಿಂದ ಪರಿಹಾರ ಕಂಡು ಬರುತ್ತಿದೆ. ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಪರಿಹಾರವನ್ನು ಜಾರಿಗೆ ತಂದರೆ ನಂತರ ಸಿಲಿಂಡರ್ ಕೇವಲ 587 ರೂ.ಗೆ ಒಂದು ಸಿಲಿಂಡರ್ ಸಿಗಲಿದೆ ಎಂಬ ಮಾತುಗಳು ಸಾರ್ವಜನಿಕರಿಗೆ ಸಿಹಿ ಸುದ್ದಿ ಎಂಬಂತೆ ಕೇಳಿ ಬರುತ್ತಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ನೆಮ್ಮದಿ ತರಬಹುದು. ಪ್ರಸ್ತುತ, ಏರುತ್ತಿರುವ ಹಣದುಬ್ಬರವು ಶ್ರೀದಸಾನ್ಯನ ಮನೆಯ ಬಜೆಟ್ ಹಾಳು ಮಾಡಿದೆ. ಒಂದೆಡೆ ಹೆಚ್ಚಿದ ಡೀಸೆಲ್, ಪೆಟ್ರೋಲ್ ಬೆಲೆಯಿಂದ ಎಲ್ಲವೂ ಗಗನ ಮುಟ್ಟಲಾರಂಭಿಸಿದ್ದರೆ, ಸಿಲಿಂಡರ್ ಬೆಲೆ ಮನೆಗಳ ಬಜೆಟ್‌ನ್ನು ಹಾಳು ಮಾಡಿದೆ.


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ