Breaking News

ಭೂಮಿ ಕಂಪಿಸಲಿದೆ, ಮೇಘ ಘರ್ಜಿಸಲಿದೆ: ಕೋಡಿಮಠ ಸ್ವಾಮೀಜಿ

Spread the love

ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು , ಭೂಮಿ ತಲ್ಲಣಗೊಂಡೀತು . ಭೂಮಿ ಕಂಪಿಸುತ್ತೆ , ಗುಡ್ಡಗಳು ಕುಸಿಯುತ್ತವೆ , ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ . ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ .

ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು , ಮಿಂಚು , ಗಾಳಿ , ಮಳೆ ಹೆಚ್ಚಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ . ಬಯಲುಸೀಮೆ ‌ ಮಲೆನಾಡಾಗುತ್ತದೆ , ಮಲೆನಾಡು ಬಯಲುಸೀಮೆಯಾಗಲು ಬಯಸುತ್ತದೆ . ಇದು ಹೀಗೆಯೇ ಮುಂದುವರಿಯುತ್ತದೆ ಎಂದು ರಾಜ್ಯದಲ್ಲಿ ಮಳೆಯಿಂದಾಗಿ ಹೆಚ್ಚುತ್ತಿರುವ ಹಾನಿ ಮತ್ತು ಮತೀಯ ಗಲಭೆಯಿಂದ ಉಂಟಾಗುತ್ತಿರುವ ಅಶಾಂತಿ ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದರು.

ಮುಂಗಾರು ಮಳೆ ಕಳೆದ ಮೇಲೆ , ಹಿಂಗಾರು ಕಡಿಮೆಯಾಗುತ್ತದೆ . ಆದರೆ ಅಕಾಲಿಕ ಮಳೆ ಹೆಚ್ಚಾಗುತ್ತದೆ. ಆಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ , ಭಂಗ , ನೋವಿದೆ . ರೋಗರುಜಿನಗಳು ಹೆಚ್ಚುತ್ತವೆ . ಕಳ್ಳಕಾಕರ ಕಾಟ , ಅಪಮೃತ್ಯಗಳು , ಕೊಲೆಗಳು , ಮತೀಯ ಗಲಭೆಗಳು ಹೆಚ್ಚಾಗಿ ಅಂತಾರಾಷ್ಟ್ರೀಯ ವಿಕೋಪಕ್ಕೆ ತುತ್ತಾಗುತ್ತದೆ . ಎಲ್ಲವೂ ಇನ್ನೂ ಇದೆ , ಇನ್ನೂ ‌ ಹೆಚ್ಚುತ್ತದೆ ಎಂದು ಹೇಳಿದ್ದಾರೆ .


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ