Breaking News

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆ? ಇನ್ಮುಂದೆ ವರ್ಷಕ್ಕೆ ಒಂದಲ್ಲ, ನಾಲ್ಕು ಅವಕಾಶ: ಡಿಟೇಲ್ಸ್​ ಇಲ್ಲಿದೆ ನೋಡಿ.

Spread the love

ನವದೆಹಲಿ : ಮುಂದಿನ ವರ್ಷ 18 ವಯಸ್ಸು ನಿಮಗೆ ಆಗುವುದಾದರೆ, ನೀವು ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಹೀಗೊಂದು ಹೊಸ ಪ್ರಕಟಣೆಯನ್ನು ಇತ್ತೀಚೆಗೆ ಚುನಾವಣಾ ಆಯೋಗ ಹೊರಡಿಸಿತ್ತು. ಇದರ ಅರ್ಥ 17 ವರ್ಷಕ್ಕಿಂತ ಮೇಲ್ಪಟ್ಟರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿದೆ.

 

ಅದರ ಮುಂದುವರೆದಿರುವ ಭಾಗವಾಗಿ ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಅವಕಾಶಗಳನ್ನು ಚುನಾವಣಾ ಆಯೋಗ ನೀಡಿದೆ.

ಇಷ್ಟು ವರ್ಷಗಳು ಕೇವಲ ಜನವರಿ 1ರಂದು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿತ್ತು. ಆದರೀಗ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್​ಗೂ ನೀವು ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಒಂದು ವೇಳೆ ಈ ನಾಲ್ಕು ದಿನಾಂಕದಲ್ಲಿ ನಿಮಗೆ 18 ವರ್ಷ ತುಂಬುವುದೇ ಆಗಿದ್ದರೆ, ನೀವು ಅರ್ಜಿಯನ್ನು ಸಲ್ಲಿಸಲು ಕೂಡ ಅರ್ಹರಾಗಿರುತ್ತೀರಿ. ಒಂದು ವೇಳೆ ಯಾವುದೋ ಕಾರಣಗಳಿಂದ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆಗದಿದ್ದರೆ ಅಂಥವರು ಕೂಡ ಈ ನಾಲ್ಕು ದಿನಾಂಕಗಳಂದು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.


Spread the love

About Laxminews 24x7

Check Also

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ ಪ್ರಯತ್ನ ಸಂಘಟನೆ 15ನೇ ವಾರ್ಷಿಕೋತ್ಸವ ಉದ್ಘಾಟನೆ

Spread the love ಬೆಳಗಾವಿ : ರಾಜಕಾರಣಿಗಳಿಂದಲೇ ಎಲ್ಲವನ್ನೂ ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ