ಹಾವೇರಿ: ಕರಾವಳಿಯಲ್ಲಿ ನಡೆದ ಘಟನೆಗಳು ಇಡೀ ರಾಜ್ಯಕ್ಕೆ ನೋವು ತರುವ ಸಂಗತಿ. ಈ ಕುರಿತು ಸಿಎಂ ಬೊಮ್ಮಾಯಿ ಗಟ್ಟಿ ನಿರ್ಧಾರ ಮಾಡಬೇಕು. ಹೈದರಾಬಾದ್‌ನಲ್ಲಿ ನಮ್ಮ ಅಧಿಕಾರಿ ಸಜ್ಜನರ್ ಅವರು ಶೂಟೌಟ್ ಮಾಡಿದಂತೆ ಇಲ್ಲಿಯೂ ಆಗಬೇಕು. ಮುಂದೆ ಏನು ಆಗುತ್ತದೆ ನೋಡೋಣ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯ ಕೊಲೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಹಿಂದೊಮ್ಮೆ ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ 9ಕ್ಕೆ ಬಾಂಬ್ ಸ್ಫೋಟ ಆಯಿತು. ಸಂಜೆಯೇ ಅಪರಾಧಿಗಳನ್ನು ಗಲ್ಲಿಗೇರಿಸಲಾ ಯಿತು. ನಮ್ಮಲ್ಲೂ ಇಂಥ ಕ್ರಮ ಆಗಬೇಕು ಎಂದರು. ಯೋಗಿ ಮಾದರಿ ಆಡಳಿತದ ಕುರಿತು ಪ್ರತಿಕ್ರಿಯಿಸಿದ ಹೊರಟ್ಟಿ, ಅದೆಲ್ಲ ನನಗೆ ಗೊತ್ತಿಲ್ಲ. ತಪ್ಪು ಮಾಡಿದವರಿಗೆ ಇಂಥ ಶಿಕ್ಷೆ ಆಯಿತು ಎಂಬುದು ಎಲ್ಲ ರಿಗೂ ಗೊತ್ತಾಗಬೇಕು ಎಂದರು.