Breaking News

ನಿಮ್ಮ ಜಮೀನಿನಲ್ಲಿ ಉಚಿತ ಕೊಳವೇ ಬಾವಿ ಕೊರೆಸಬೇಕೇ: ಈಗಲೇ ಅರ್ಜಿ ಸಲ್ಲಿಸಿ

Spread the love

ಬೆಂಗಳೂರು: ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ. ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ.

ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಮತ್ತು ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ ಮತ್ತು ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶ.

ಪ್ರಮುಖವಾಗಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ತಂದಿದೆ. ಉಚಿತವಾಗಿ ಕೊಳವೆ ಬಾವಿ (ಬೊರ್ ವೆಲ್ )/ ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆಯಡಿ ಧನ ಸಹಾಯ ಪಡೆಯಬಹುದು. ಇದಕ್ಕೆ ಬಜೆಟ್​​ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ.

ಅನ್ವಯವಾಗುವ ಜಿಲ್ಲೆಗಳ್ಯಾವುವು, ಸಹಾಯಧನವೆಷ್ಟು? : ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು ನಾಲ್ಕು ಲಕ್ಷ ರೂ. ಗಳಿಗೆ ನಿಗದಿಪಡಿಸಲಾಗಿದೆ.

ಮೂರುವರೆ ಲಕ್ಷ ಸಹಾಯಧನ ಸಿಗಲಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4 ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರ ಜಿಲ್ಲೆಗಳ ರೈತರಿಗೆ 2 ಲಕ್ಷ ಸಹಾಯಧನವಿದ್ದು, 50 ಸಾವಿರ ರೂ.ಗಳನ್ನು ವಾರ್ಷಿಕ ಶೇ. 4 ರ ಬಡ್ಡಿಯಂತೆ ಸಾಲ ತೀರಿಸಬೇಕಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಕರೆಯುವ ನಿಗಮಗಳ್ಯಾವುವು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ಬೋವಿ ಸಮುದಾಯದ ಅಭಿವೃದ್ಧಿ ನಿಗಮ.

ಜಮೀನಿನಲ್ಲಿ ಉಚಿತ ಕೊಳವೇ ಬಾವಿ ಕೊರೆಸಲು ಅರ್ಜಿ ಆಹ್ವಾನ

ಜಮೀನಿನಲ್ಲಿ ಉಚಿತ ಕೊಳವೇ ಬಾವಿ ಕೊರೆಸಲು ಅರ್ಜಿ ಆಹ್ವಾನ

ಯೋಜನೆ ಪಡೆಯುವ ಅರ್ಹರು ಯಾರು? : ಪ್ರವರ್ಗ 1,2ಎ,3ಎ,3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಾಗಿಬೇಕು. ಕನಿಷ್ಠ 1.20 ಎಕರೆ, ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಅರ್ಜಿದಾರರು ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಬಾರದು. ರಾಜ್ಯದ ಕಾಯಂ ನಿವಾಸಿಯಾಗಿರಬೇಕು.

ಠೇವಣಿ ಎಷ್ಟು : ಕೊಳವೆ ಬಾವಿ ಕೊರೆಸಲು ವೈಯಕ್ತಿಕವಾಗಿ ಪಾವತಿಸಬೇಕಾದ ಠೇವಣಿ ಈ ಕೆಳಕಂಡಂತೆ ಇದೆ. ನೋಂದಣಿ ಶುಲ್ಕ 50 ರೂ., ಜೊತೆಗೆ ಶೇ.18 ರಷ್ಟು ಜಿಎಸ್ ಟಿ. ಭದ್ರತಾ ಠೇವಣಿ ಶುಲ್ಕ 1290 ರೂ., 1 ಎಚ್ ಪಿಗೆ. ಮೀಟರ್ ಸುರಕ್ಷಾ ಠೇವಣಿ 3 ಸಾವಿರ ರೂ., ಮೀಟರ್ ಬಾಕ್ಸ್ 2100 ರೂ. ಮೇಲ್ವಿಚಾರಣಾ ಶುಲ್ಕ 150 ರೂ. ಜೊತೆಗೆ ಜಿಎಸ್ ಟಿ ಶೇ. 18 ರೂ.

ಬೇಕಿರುವ ದಾಖಲೆ ಏನು? : ಆಸಕ್ತರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಫ‌ಲಾನುಭವಿಗಳ ಭಾವಚಿತ್ರ, ಬ್ಯಾಂಕ್‌ ಪಾಸ್‌ ಬುಕ್‌, ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಕಡ್ಡಾಯವಾಗಿದೆ.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ