Breaking News

ಬೆಂಗಳೂರು: ‘ಸುಂದರಿ ಪತ್ನಿ’ ಮೇಲೆ ಆಯಸಿಡ್ ಹಾಕಿದ್ದ ಪತಿಗೆ ಕಠಿಣ ಶಿಕ್ಷೆ!

Spread the love

ಬೆಂಗಳೂರು: ಪತ್ನಿಯ ಮೇಲೆ ಆಯಸಿಡ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ, ಕಠಿಣ ಶಿಕ್ಷೆ ಮತ್ತು 25 ಸಾವಿರ ರು ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೌಂದರ್ಯ ತಮ್ಮ ವೈವಾಹಿಕ ಜೀವನವನ್ನು ಹಾಳು ಮಾಡುತ್ತದೆ ಎಂದು ಹೆದರಿದ 44 ವರ್ಷದ ಆಟೋ ಡ್ರೈವರ್ ತನ್ನ ಪತ್ನಿಯ ಮೇಲೆ ಆಯಸಿಡ್ ಸುರಿದಿದ್ದ.

 

2017ರ ಜುಲೈ 14ರಂದು ಕೆಂಪೇಗೌಡನಗರದ ಸನ್ಯಾಸಿಪಾಳ್ಯದ ಮನೆಯಲ್ಲಿ ಮಂಜುಳಾ ಮೇಲೆ ಆರೋಪಿ ಚೆನ್ನೇಗೌಡ ಆಸಿಡ್ ಎರಚಿದ್ದ.

ಆಕೆ ತನ್ನ ಸೌಂದರ್ಯದಿಂದ ಬೇರೆ ಪುರುಷರನ್ನು ಆಕರ್ಷಿಸುತ್ತಿದ್ದಾಳೆ ಎಂದು ಆತ ಭಾವಿಸಿದ್ದ. ಆತನ ಕಿರುಕುಳವನ್ನು ಸಹಿಸಲಾಗದೆ, ಘಟನೆಗೆ ನಾಲ್ಕು ದಿನಗಳ ಮೊದಲು ಅವಳು ತನ್ನ ಕೆಲಸವನ್ನು ಸಹ ತೊರೆದಿದ್ದಳು.

ಆಯಸಿಡ್ ದಾಳಿಯಿಂದಾಗಿ ಪತ್ನಿ ಮಂಜುಳಾ ಕೈ, ಕಾಲು, ಮುಖ ಹಾಗೂ ಹೊಟ್ಟೆ ಭಾಗ ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಿಸದೇ ಆಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು ಚೆನ್ನೇಗೌಡ ದೋಷಿ ಎಂದು 46ನೇ ಸಿಸಿಎಚ್ ನ್ಯಾಯಾಲಯ ತೀರ್ಪು ನೀಡಿದೆ. ದಂಪತಿಗೆ ಸುಮಾರು 21 ವರ್ಷಗಳ ಹಿಂದೆ ಮದುವೆಯಾಗಿತ್ತು ಮತ್ತು ಇಬ್ಬರು ಮಕ್ಕಳಿದ್ದರು.

ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಐದು ದಿನಗಳ ಬಳಿಕ ಬಂಧಿಸಲಾಗಿತ್ತು. ಆತನ ಸ್ನೇಹಿತರೊಬ್ಬರು ಆಸಿಡ್ ಸಂಗ್ರಹಿಸಲು ಸಹಾಯ ಮಾಡಿದ್ದರು. ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಸಾಯುವ ಮುನ್ನ ಹೇಳಿಕೆ ನೀಡಿದ್ದಳು. ನಾನು ಹಾಲು ತರಲು ಹೋಗಿದ್ದೆ, ನನ್ನ ತಾಯಿಯ ಮೇಲೆ ಆಯಸಿಡ್ ಎರಚಿದ್ದು ಯಾರು ಎಂದು ತನಗೆ ತಿಳಿದಿಲ್ಲ ಎಂದು ಮೃತ ಮಹಿಳೆಯ ಪುತ್ರ ಹೇಳಿದ್ದ. ಆತ ಮೇಜರ್ ಆಗಿದ್ದರಿಂದ ಅವರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿತ್ತು.

ಬುಧವಾರ ತೀರ್ಪು ಪ್ರಕಟಿಸಲಾಯಿತು. ಆರೋಪಿಗೆ ಆಸಿಡ್ ಪೂರೈಸಿದ ವ್ಯಕ್ತಿಯನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲಾಗಿದೆ’ ಎಂದು 46ನೇ ಸಿಸಿಎಚ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಲತಾ ತಿಳಿಸಿದರು. ಆಗಾಗ ಜಗಳ ನಡೆಯುತ್ತಿದ್ದ ಕಾರಣ ಮಂಜುಳಾ ಪತಿಯನ್ನು ಬಿಟ್ಟು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ