Breaking News

ಯಾವಾಗ್ಯಾವಾಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲ್ವೋ ಆವಾಗ ಈ ಕೂಗು ಬರುತ್ತೆ, ನಾನು ಕೂಗು ಎತ್ತೋದು ನಿಜ.

Spread the love

ಸಿಎಂ ಸ್ಥಾನಕ್ಕೆ ಟವೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಉಮೇಶ ಕತ್ತಿ ಸಿಎಂ ಸ್ಥಾನದ ಕನಸಲ್ಲೆ ತೇಲಾಡುತ್ತಿದ್ದಾರೆ. ನಸೀಬ್‌ನಲ್ಲಿದ್ದರೆ ಸಿಎಂ ಸ್ಥಾನ ಒಂದಿನ ಬರಬಹುದು ಎಂದು ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟರು.

ವಿಜಯಪುರ ಜಿಲ್ಲೆಯ ಆಲಮಟ್ಟಿ ಯಲ್ಲಿ‌ ಮಾದ್ಯಮಗಳ ಜೊತೆಯಲ್ಲಿ ಮಾತನಾಡಿ ನನಗಿನ್ನು 60 ವಯಸ್ಸು, 15 ವರ್ಷ ಇದೆ ಬಿಜೆಪಿ ರೂಲ್ ನಂತೆ, ಇನ್ನು 15 ವರ್ಷ ಶಾಸಕನಾಗಿ ಇರ್ತಿನಿ, ಟೈಂ ಬರಬಹುದು.

 

ನಾವು ದಿನ ಬೇಡಿದರೇ ಸಿಗೊಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸೀಟಿಗಾಗಿ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ-ಡಿಕೆಶಿ ಹುಚ್ಚು ಹತ್ತಿದಂತೆ ಆಡ್ತಿದ್ದಾರೆ, ಅವರಿಗೆ ಏನಾಗಿದೆಯೋ ಗೊತ್ತಿಲ್ಲ

. ಸಿಎಂ ಸ್ಥಾನಕ್ಕಾಗಿ ಬಡೆದಾಡುತ್ತಿದ್ದಾರೆ, ಮೊದಲು ಅವರ ಪಕ್ಷ ಅಧಿಕಾರಕ್ಕೆ ಬರಬೇಕು, ಬಂದ ಮೇಲೆ ಸಿಎಂ ಸ್ಥಾನಕ್ಕಾಗಿ ಬಡೆದಾಡಬೇಕು ಎಂದು ವ್ಯಂಗ್ಯವಾಡಿದರು.

ಹೈಕಮಾಂಡ್ ನಿಂದ ವಾರ್ನ್ ಬಂದಿದೆ, ಜಮೀರ್ ಗು ಹೈಕಮಾಂಡ್ ವಾರ್ನ್ ಮಾಡಿದೆ.ಮೊದಲೇ ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಸರಿ ಇಲ್ಲ ಎನ್ನುತ್ತಾ ಮತ್ತೆ ಮರಳಿ ಬಿಜೆಪಿ ಅಧಿಕಾರಕ್ಕೆ ಬರೋದು ಪಕ್ಕಾ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಒಡೆಯುತ್ತೆ, ಕಾಂಗ್ರೆಸ್ ಒಡೆದು ಚೂರು ಚೂರಾಗಲಿದೆ, ಈ ಬಾರಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ವಿಚಾರದಲ್ಲಿ ಉತ್ತರಿಸಿ ಯಾವಾಗ್ಯಾವಾಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲ್ವೋ ಆವಾಗ ಈ ಕೂಗು ಬರುತ್ತೆ, ನಾನು ಕೂಗು ಎತ್ತೋದು ನಿಜ. ನಾನೇನು ಹೊಸದಾಗಿ ಹೇಳ್ತಿಲ್ಲ. ಕಳೆದ 20 ವರ್ಷಗಳಿಂದ ಉತ್ತರ ಕರ್ನಾಟಕಕ್ಕಾಗಿ ಹೋರಾಟ ಮಾಡ್ತಿದ್ದೇನೆ ಎಂದರು.

 


Spread the love

About Laxminews 24x7

Check Also

ಅಪರಾದ ತಗ್ಗಿಸಲು ಶ್ವಾನಗಳಿಗೆ ಹೆಚ್ಚಿನ ತರಬೇತಿ ಅವಶ್ಯ: ಸಚಿವ ಸತೀಶ ಜಾರಕಿಹೊಳಿ

Spread the loveಬೆಳಗಾವಿ: ನಿಷ್ಕಲ್ಮಶ, ಪ್ರೀತಿ, ನಿಷ್ಠೆಗೆ ಶ್ವಾನಗಳಿಗೆ ಶ್ವಾನಗಳೇ ಸರಿಸಾಟಿ, ಶ್ವಾನವನ್ನು ಪ್ರೀತಿಯಿಂದ ಬೆಳೆಸಿದಾಗ ಮಾತ್ರ ಇಲಾಖೆಯಲ್ಲಿ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ