Breaking News

ಅಥಣಿ ಪೋಲಿಸ್ ಠಾಣೆಗೆ ಮೊದಲಬಾರಿಎಸ್ ಪಿ ಸಂಜಿವ್ ಪಾಟೀಲ ಭೇಟಿ

Spread the love

ಬೆಳಗಾವಿ ಜಿಲ್ಲಾ ನೂತನ ಎಸ್ ಪಿ ಯಾಗಿ ಅಧಿಕಾರ ವಹಿಸಿದ ಬಳಿಕ ಅಥಣಿ ಪೋಲಿಸ್ ಠಾಣೆಗೆ ಮೊದಲಬಾರಿಎಸ್ ಪಿ ಸಂಜಿವ್ ಪಾಟೀಲ ಭೇಟಿ ನೀಡಿದರು.

ಅಥಣಿ ಪಿಎಸ್ಐ ಕುಮಾರ್ ಹಾಡಕರ್ ಮತ್ತು ಸಿಬ್ಬಂದಿಗಳಿಂದ ಗೌರವ ಸಮರ್ಪಣೆ ಪಡೆದ ನಂತರ ಅಥಣಿ ಪೋಲಿಸ್ ಠಾಣೆಯ ಎಎಸ್ಐ, ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಖುದ್ದು ಮಾಹಿತಿ ಪಡೆದರು .

ಬಳಿಕ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೇಸಿ ಮಾತನಾಡಿದ ಅವರು ಮಾರ್ಚ್ ತಿಂಗಳಲ್ಲಿ ಅಥಣಿ ಪೋಲಿಸ್ ಸರಹದ್ದಿನಲ್ಲಿ ಓರ್ವ ವ್ಯಕ್ತಿಯ ಕತ್ತು ಹಿಸುಕಿ ಕೊಲೆ ಮಾಡಿ ಇದೊಂದು ಅಪಘಾತ ಎಂದು ಬಿಬಿಸಿದ್ದ ಪ್ರಕರಣದಲ್ಲಿ ಮೂವರು ಕೋಲೆ ಆರೋಪಿಗಳನ್ನ ಅಥಣಿ ಪೋಲಿಸ್ರು ಬಂಧಿಸಿ ಕಂಬಿಹಿಂದೆ ಕಳಿಸಿದ್ದಾರೆ ಎಂಬ ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲಾ ಪೋಲಿಸ್ ಅಧಿಕ್ಷಕರು ಹೆಚ್ಚುವರಿ ಪೋಲಿಸ್ಅಧೀಕ್ಷಕರು ಅಥಣಿ ಡಿವೈಎಸ್ಪಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಬಸನಗೌಡರ, ಮತ್ತು ಅಥಣಿ ಠಾಣೆಯ ಪಿಎಸ್ಐ ಕುಮಾರ್ ಹಾಡಕರ್, ಮತ್ತು ಸಿಬ್ಬಂದಿಗಳಾದ ಎಎಸ್ಐ ವೈ ವೈ ರಾಮೋಜಿ, ಪಿ ಬಿ ನಾಯಿಕ, ಎ ಎಈರಕರ,ಎಮ್ ಬಿ ದೊಡಮನಿ, ಆರ್ ಎ ಕಮತೆ, ಪ್ರಶಾಂತ ಆಲಮಟ್ಟಿ, ಎಮ್‍ಎಮ್‍ಖೋತ್, ಸಿಬ್ಬಂದಿಗಳು ಪ್ರಕರಣ ಭೇದಿಸುವಲ್ಲಿ ಭಾಗಿಯಾಗಿದ್ದ ಪೋಲಿಸ್ ಸಿಬ್ಬಂದಿಗಳಿಗೆ ಬಹುಮಾನ ಮತ್ತು ಪ್ರಶಂಸಣಾ ಪತ್ರ ನೀಡಲಾಗುವು ಎಂದು ಎಸ್ ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ