ರಾಜಕುಮಾರ್ ಟಾಕಳೆ ನನ್ನನ್ನು ಮದುವೆಯಾಗಿ ನನ್ನೊಂದಿಗಿನ ಏಕಾಂತದಲ್ಲಿನ ವೀಡಿಯೋ ಮಾಡಿ ಅವನ್ನು ವೆಬ್‍ಸೈಟ್‍ವೊಂದಕ್ಕೆ ಮಾರಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಇದೆ.
ಆತನಿಂದ ನನಗೆ ಹನಿಟ್ರ್ಯಾಪ್ ಆಗಿದೆ. ಇದರಿಂದ ನನ್ನ ಹಣ ಹಾಗೂ ಗೌರವ ಹಾನಿಯಾಗಿದೆ ಎಂದು ನವ್ಯಶ್ರೀ ರಾವ್ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ನವ್ಯಶ್ರೀ ರಾವ್ ಸಾಮಾಜಿಕ ಜಾಲತಾಣದಲ್ಲಿ ಅವರ ಅಶ್ಲೀಲ ವಿಡಿಯೋ, PHOTO ವೈರಲ್ ಆದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಾನು ಭಾರತದಲ್ಲಿ ಇಲ್ಲದೇ ಇರೋ ಸಂದರ್ಭದಲ್ಲಿ ಈ ಕೃತ್ಯ ಮಾಡಿದ್ದಾರೆ. ಮೊದಲಿಗೆ ನಾನು ಕಂಪ್ಲೆಟ್ ಕೊಡಬೇಕಿತ್ತು. ಆದರೆ ರಾಜಕುಮಾರ ಟಾಕಳೆ ನನ್ನ ವಿರುದ್ಧ ಹನಿಟ್ರ್ಯಾಪ್ ಮಾಡಿದ್ದಾರೆಂದು ದೂರು ನೀಡಿದ್ದರು.
ನನಗೆ ಯಾವುದೇ ಪೆÇಲೀಸರು ರೀಚ್ ಆಗಿಲ್ಲ. ಹಾಗಾಗಿ ನಾನು ಕಂಪ್ಲೆಟ್ ಕೊಡಲು ಬೆಳಗಾವಿಗೆ ಸೋಮವಾರ ಬಂದಿದ್ದೆ. ಆದರೆ ನನಗೆ ಅಂದು ಸಾಕಷ್ಟು ಒತ್ತಡ ಬಂದಿದ್ದರಿಂದ ನಾನು ಕಂಪ್ಲೈಂಟ್ ನೀಡಲಿಲ್ಲ ಎಂದರು.