ನಮ್ಮ ಪಕ್ಷದ ಉನ್ನತ ನಾಯಕ ಜಮೀರ್ ಅಹ್ಮದ್‌ಖಾನ್. ಅವರನ್ನು ನೀವು ಎಲ್ಲ ರೀತಿಯಿಂದ ಬೆಳಸಬೇಕು.ಅವರು ನಮ್ಮ ಪಕ್ಷದ ಬಾಹುಬಲಿ. ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 3ರಂದು ಸಿದ್ದರಾಮಯ್ಯನವರ ಹುಟ್ಟು ಹಬ್ಬ ದಾವಣಗೆರೆಯಲ್ಲಿ ಮಾಡ್ತಿದ್ದೇವೆ. ಹಿಂದಿನ ಮುಖ್ಯಮಂತ್ರಿ ನಮ್ಮ ನಾಯಕ ಸಿದ್ದರಾಮಯ್ಯ ನವರ ಹುಟ್ಟು ಹಬ್ಬ ಆಚರಣೆ ಮಾಡ್ತಿದ್ದೇವೆ. ಬೆಂಗಳೂರಿನಿಂದ ನಮಗೆ ಆಹ್ವಾನ ನೀಡಲು ಜಮೀರ್ ಬಂದಿದ್ದಾರೆ.ನಮ್ಮ ಪಕ್ಷದ ಉನ್ನತ ನಾಯಕ ಜಮೀರ್ ಅಹ್ಮದ್. ಅವರನ್ನು ನೀವು ಎಲ್ಲ ರೀತಿಯಿಂದ ಬೆಳಸಬೇಕು.ಅವರು ನಮ್ಮ ಪಕ್ಷದ ಬಾಹುಬಲಿ. ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ ಎಂದರು.
ಒಂಬತ್ತು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ.ಈ ಚುನಾವಣೆಯಲ್ಲಿ ನೀವೆಲ್ಲಾ ಒಗ್ಗಟ್ಟಾಗಬೇಕು. ಬರುವ ಚುನಾವಣೆಯಲ್ಲಿ ಗಟ್ಟಿಯಾಗಿರಬೇಕು.ಜಾಫರ್ ಶರೀಫ್ ನಂತರ ಮತ್ತೊಬ್ಬ ಮುಸ್ಲಿಂ ನಾಯಕರಾಗಲು ಜಮೀರ್‌ಗೆ ಅವಕಾಶವಿದೆ. ಎಲ್ಲೇ ಹೋದ್ರೂ ಜಮೀರ್ ಐದರಿಂದ ಹತ್ತು ಲಕ್ಷ ಜೇಬಿನಲ್ಲಿರುತ್ತೆದೆ. ನಮ್ಮ ಬಳಿ ಅಷ್ಟು ಹಣ ಇಟ್ಕೊಳ್ಳುವುದಿಲ್ಲ. ವಾಪಸ್ ಹೋಗುವಾಗ ಖಾಲಿ ಜೇಬಿನಿಂದ ಹೋಗ್ತಾರೆ. ಇಡಿ, ಐಟಿ ನಿಮ್ಮ ಹಿಂದೆ ಬಿದ್ದಿದೆ ಆದ್ರೇ ನಿಮ್ಮ ಜತೆಗೆ ಪಕ್ಷ ಮತ್ತು ಸಮುದಾಯವಿದೆ. ಮುಂದಿನ ದಿನಗಳಲ್ಲಿ ಅಚ್ಚೆದಿನ್ ಬರುತ್ತದೆ.ನೀವು ಕಾಯಬೇಕು ಎಂದರು.