ಬೆಳಗಾವಿ ನಗರದ ಮಹಿಳಾ ಪೊಲೀಸ್ ಠಾಣೆಯ ಮಾನವ ಕಳ್ಳಸಾಗಾಣಿಕೆ ನಿಗ್ರಹ ಪಡೆ (AHTU) ಹಾಗೂ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098, ಕಾರ್ಮಿಕ ಇಲಾಖೆ, ಯೋಜನಾ ನಿರ್ದೇಶಕರು ಬಾಲ ಕಾರ್ಮಿಕ ಯೋಜನೆ ಬೆಳಗಾವಿ ಮತ್ತು ಸಮಾಲೋಚಕರ ಸಹಯೋಗದೊಂದಿಗೆ
ಬೆಳಗಾವಿ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ಸಿಗ್ನಲ್ ಹತ್ತಿರ ಭಿಕ್ಷಾಟಣೆ ಮಾಡುತ್ತಿದ್ದ 8 ಜನ ಹೆಣ್ಣು ಮಕ್ಕಳು 2 ಜನ ಗಂಡು ಮಕ್ಕಳು ಹಾಗೂ 12 ಜನ ಮಹಿಳೆಯರನ್ನು ಗಮನಿಸಿ ಅವರನ್ನು ವಶಕ್ಕೆ ಪಡೆದು ಅವರ ಯೋಗಕ್ಷೇಮ ಮತ್ತು ರಕ್ಷಣೆ ದೃಷ್ಟಿಯಿಂದ ಮಕ್ಕಳು ಹಾಗೂ ಮಹಿಳೆಯರ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇಂತಹ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಮುಂದುವರೆಯುವುದು….
Laxmi News 24×7