ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗುವುದು ಸಂಪ್ರದಾಯ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಾದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಖಾಸಗಿ ಟಿವಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದವರೇ ಸಿಎಂ ಆಗಲೇಬೇಕು ಎಂದೇನಿಲ್ಲ. ಆಗದೇ ಇದ್ದವರನ್ನೂ ಮುಖ್ಯಮಂತ್ರಿಯಾಗಿ ಮಾಡಿದ ಸಂಪ್ರದಾಯ ಇದೆ. ಪಂಜಾಬಿನಲ್ಲಿ ಈ ರೀತಿ ಮಾಡಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಯಾರು ಬೇಕಾದರೂ ಮುಖ್ಯಮಂತ್ರಿಯಾಗುತ್ತಾನೆ ಎಂದು ಆಕಾಂಕ್ಷೆ ವ್ಯಕ್ತಪಡಿಸಬಹುದು. ತಮ್ಮ ಸಮುದಾಯದ ಸಭೆಯಲ್ಲಿ ನಾನು ಸಿಎಂ ಆಗುವುದಕ್ಕೆ ಅವಕಾಶವಿದೆ. ಬೆಂಬಲ ನೀಡಿ ಎಂದು ಡಿ.ಕೆ.ಶಿವಕುಮಾರ್ ಹೇಳುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅಂತಿಮವಾಗಿ ಅದನ್ನು ನಿರ್ಧರಿಸುವವರು ಶಾಸಕರು ಹಾಗೂ ಹೈಕಮಾಂಡ್
Laxmi News 24×7