Breaking News

ಕಮತನೂರ ಗೇಟ ಬಳಿ ದಾಳಿ ಮಾಡಿ 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡ ಅಬಕಾರಿ ಅಧಿಕಾರಿಗಳು

Spread the love

ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಕಂಪನಿಯ 18.30 ಲಕ್ಷ ರೂಪಾಯಿ ಮೌಲ್ಯದ ಸಾರಾಯಿಯನ್ನು ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.

ಹೌದು ಗೋವಾ ರಾಜ್ಯದಿಂದ ಅಂಬೋಲಿ ಮಾರ್ಗವಾಗಿ ಐಚರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ ಬಳಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಸಾರಾಯಿ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದರು. ಲಾರಿಯಲ್ಲಿ ಇದ್ದ ಸಾರಾಯಿ ಬಾಕ್ಸ್‍ಗಳಲ್ಲಿ ಇಂಪಿರಿಯಲ್ ಬ್ಲ್ಯೂ, ಮ್ಯಾಕ್ ಡಾವೇಲ್ಸ್ ವಿಸ್ಕಿ, ರಾಯಲ್ ಸ್ಟಾಗ್ ಸೇರಿದಂತೆ ವಿವಿಧ ಬಗೆಯ ಸಾರಾಯಿ ಇದ್ದವು. ಆರೋಪಿ ಬೆಳಗಾವಿ ಖನಗಾವಿಯ ಬಸವರಾಜ ದಿಂಡಲಕುಂಪಿ(36) ವಶಕ್ಕೆ ಪಡೆಯಲಾಗಿದೆ. ವಾ.ಓ: ಪಿರೋಜಖಾನ ಕಿಲ್ಲೇದಾರ ಇವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಚಿಕ್ಕೋಡಿ ವಲಯ ಉಪ ಆಯುಕ್ತ ಜಗದೀಶ್ ಕುಲಕರ್ಣಿ ತಿಳಿಸಿದ್ದಾರೆ. 


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ