ಬೆಂಗಳೂರು: ವಿಧಾನಸಭೆ ಚುನಾವಣೆಗೆ ಒಂಭತ್ತು ತಿಂಗಳು ಮುನ್ನವೇ ಮೂರೂ ಪಕ್ಷಗಳು ಸಜ್ಜಾಗುತ್ತಿದ್ದು, ಸಮುದಾಯದ ಮತಗಳ ಕ್ರೋಡೀ ಕರಣ ಮತ್ತು ಯಾತ್ರೆಗಳ ಮೂಲಕ ಮತದಾರರ ಮನಗೆಲ್ಲಲು ಈಗಿನಿಂದಲೇ ಕಸರತ್ತು ಆರಂಭಿಸಿವೆ.
ಸರಕಾರದ ಸಾಧನೆ ತಿಳಿಸಲು ಬಿಜೆಪಿ ಪ್ರವಾಸ, “ಘರ್ ಘರ್ ಪೆ ತಿರಂಗಾ’ ಯಾತ್ರೆ ಹಮ್ಮಿಕೊಂಡಿದೆ.
ಕಾಂಗ್ರೆಸ್ “ಸ್ವಾತಂತ್ರ್ಯದ ಅಮೃತಮಹೋತ್ಸವ ನಡಿಗೆ’, ಆ ಬಳಿಕ “ಭಾರತ್ ಜೋಡೋ’ ಯಾತ್ರೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಜೆಡಿಎಸ್ “ಜನತಾ ಜಲಧಾರೆ’, “ಜನತಾಮಿತ್ರ’ ಮುಗಿಸಿ ಆಗಸ್ಟ್‌ನಲ್ಲಿ “ಪಂಚರತ್ನ ಯಾತ್ರೆ’ಗೆ ಸಜ್ಜಾಗುತ್ತಿದೆ.
ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನ ಸಮಾವೇಶ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜು. 28ರಂದು ನಡೆಯಲಿರುವ ಸಾಧನ ಸಮಾವೇಶಗಳು ಕೂಡ ರಾಜಕೀಯ ಮಹತ್ವ ಪಡೆದಿವೆ.
ಗೆಲ್ಲುವ ಗುರಿ
ಬಿಜೆಪಿ ಮತ್ತು ಕಾಂಗ್ರೆಸ್ 150 ಸ್ಥಾನಗಳ ಗುರಿ ಇಟ್ಟುಕೊಂಡಿದ್ದರೆ, ಜೆಡಿಎಸ್ 123 ಸ್ಥಾನ ಗೆಲ್ಲುವ ಗುರಿ ಹಾಕಿ ಕೊಂಡಿದೆ. ಹೀಗೆ ಮೂರು ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರಗಳೊಂದಿಗೆ ಚುನಾವಣೆ ಸಮರಕ್ಕೆ ಅಣಿಯಾಗು ತ್ತಿವೆ. ಮೂರೂ ಪಕ್ಷಗಳಿಗೆ ಸಮುದಾಯಗಳ ಮತಬುಟ್ಟಿಯತ್ತಲೇ ಗಮನ ಇರುವುದು ವಿಶೇಷ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆ ನಡುವೆಯೇ ಜುಲೈ -ಆಗಸ್ಟ್ ತಿಂಗಳಲ್ಲಿ ರಾಜಕೀಯ ಚಟುವಟಿಕೆ ಗಳು ಗರಿಗೆದರುವ ಲಕ್ಷಣಗಳು ಕಂಡುಬರುತ್ತಿವೆ.
ಬಿಜೆಪಿ ಕಾರ್ಯತಂತ್ರ
ಬಿಜೆಪಿಯು ಚಿಂತನ ಮಂಥನ ಸಭೆಯಲ್ಲಿ ಮುಂದಿನ ಚುನಾವಣೆಯನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಿ ದಲಿತ, ಹಿಂದುಳಿದ ಮತದಾರರ ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಮುಖ್ಯಮಂತ್ರಿಯವರು ಆಯ್ದ 50 ವಿಧಾನಸಭಾ ಕ್ಷೇತ್ರಗಳಲ್ಲಿ ರ್‍ಯಾಲಿ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿ ಅಲ್ಲೇ ಫಲಾನು ಭವಿಗಳ ಸಭೆ ನಡೆಸಲಿದ್ದಾರೆ. ಈ ಮೂಲಕ ಅವರನ್ನು ಬಿಜೆಪಿಯತ್ತ ಸೆಳೆಯುವ ಕಾರ್ಯತಂತ್ರ ಮಾಡಲಾಗಿದೆ. ಮತ್ತೂಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ “ಒಂದು ದಿನಕ್ಕೆ ಒಂದು ಜಿÇÉೆ’ ಎಂಬ ಸಂಘಟ ನಾತ್ಮಕ ಕಾರ್ಯಕ್ರಮದ ಮೂಲಕ ಜಿಲ್ಲಾ ಕೇಂದ್ರಗಳಿಗೆ ಪ್ರವಾಸ ಹಮ್ಮಿಕೊಳ್ಳ ಲಾಗಿದೆ. ಬೂತ್ ಪ್ರಮುಖರ ಸಮಾವೇಶ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳ ಸಮಾವೇಶದ ಮೂಲಕ ಚುನಾವಣೆಗೆ ಸಜ್ಜುಗೊಳಿಸುವ ಕೆಲಸ ನಡೆದಿದೆ.
ಪಕ್ಷದ 7 ಮೋರ್ಚಾಗಳ ಬೃಹತ್ ಸಮಾವೇಶವನ್ನು ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ. 9ರಿಂದ 15ರ ತನಕ “ಹರ್ ಘರ್ ತಿರಂಗಾ’ ಕಾರ್ಯಕ್ರಮ ವನ್ನು ರಾಜ್ಯದ 312 ಮಂಡಲಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ರಾಜ್ಯದ ಲಕ್ಷಾಂತರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದು ಇದರ ಉದ್ದೇಶ. ಯುವ ಮೋರ್ಚಾ ವತಿಯಿಂದ ಆ. 1ರಿಂದ 15 ತನಕ 224 ವಿಧಾನಸಭಾ ಕ್ಷೇತ್ರಗಳಲ್ಲಿ 75 ಕಿ.ಮೀ. ಬೈಕ್ ರ್‍ಯಾಲಿ ನಡೆಸಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್‌ನಿಂದ “ಜೋಡೋ’ ಯಾತ್ರೆ
ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ. ನಡಿಗೆ ಮತ್ತು ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜದ ಸಹಿತ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅ. 2ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ “ಭಾರತ್ ಜೋಡೋ’ ಯಾತ್ರೆ ಆರಂಭವಾಗಲಿದ್ದು, ರಾಜ್ಯದಲ್ಲಿಯೂ 27 ದಿನ ಸಂಚರಿಸಲಿದೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಮಾವೇಶದ ಮೂಲಕ ರಾಜಕೀಯವಾಗಿ ಶಕ್ತಿ ಪಡೆಯಲು ಕಾಂಗ್ರೆಸ್ ತೀರ್ಮಾನಿಸಿದೆ.
ಜೆಡಿಎಸ್ ರಾಜ್ಯವ್ಯಾಪಿಯಾಗಿ “ಜನತಾ ಜಲಧಾರೆ’ ನಡೆಸಿದ್ದು, ಬೆಂಗಳೂರಿನಲ್ಲಿ “ಜನತಾಮಿತ್ರ’ ಅಭಿಯಾನ ಆರಂಭಿಸಿದೆ. ಜು. 17ರಂದು ಬೃಹತ್ ಸಮಾವೇಶವನ್ನೂ ಹಮ್ಮಿಕೊಂಡಿದೆ. ಆಗಸ್ಟ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ “ಪಂಚರತ್ನ ಯಾತ್ರೆ’ ಆರಂಭವಾಗಲಿದ್ದು, 3 ತಿಂಗಳು ನಡೆಯಲಿದೆ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಯಾವೆಲ್ಲ ಯೋಜನೆ ಆರಂಭಿಸಲಾಗುವುದು ಎಂಬ ಬಗ್ಗೆ ತಿಳಿಸುವುದು ಯಾತ್ರೆಯ ಪ್ರಮುಖ ಉದ್ದೇಶ.
ಹೊಸ ರಾಜ್ಯಾಧ್ಯಕ್ಷರು?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರ ಅವಧಿ ಆಗಸ್ಟ್‌ಗೆ ಅಂತ್ಯಗೊಳ್ಳಲಿದ್ದು, ಹೊಸ ಅಧ್ಯಕ್ಷರ ನೇಮಕದ ನಿರೀಕ್ಷೆಯಿದೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಕುರುಬ ಸಮುದಾಯದ ವಿಪಕ್ಷ ನಾಯಕ, ಒಕ್ಕಲಿಗ ಕೆಪಿಸಿಸಿ ಅಧ್ಯಕ್ಷ, ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷರಿದ್ದಾರೆ. ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯದ ಅಧ್ಯಕ್ಷ ಮತ್ತು ಒಕ್ಕಲಿಗ ಶಾಸಕಾಂಗ ಪಕ್ಷದ ನಾಯಕ, ಕುರುಬ ಕೋರ್ ಕಮಿಟಿ ಅಧ್ಯಕ್ಷ, ದಲಿತ ಸಮುದಾಯದ ಸಂಸದೀಯ ಪಕ್ಷದ ಅಧ್ಯಕ್ಷರಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯೇ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಅಧ್ಯಕ್ಷ ಸ್ಥಾನ ಯಾವ ಸಮುದಾಯಕ್ಕೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀಡಿದ ಯೋಜನೆಗಳು ಹಾಗೂ ಕೇಂದ್ರ , ರಾಜ್ಯ ಸರಕಾರಗಳ ವೈಫಲ್ಯಗಳನ್ನು ಜನರ ಮುಂದಿ ಡಲಿದ್ದೇವೆ. ಪಕ್ಷಕ್ಕೆ ಅನುಕೂಲಕರವಾದ ಎಲ್ಲ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.
-ಡಿ.ಕೆ.ಶಿವಕುಮಾರ್,
ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ -ಬಿಜೆಪಿ ಎರಡೂ ಪಕ್ಷಗಳ ಆಡಳಿತವನ್ನು ಜನರು ನೋಡಿ ಆಗಿದೆ. ಜೆಡಿಎಸ್ ಜನರ ಹಿತದೃಷ್ಟಿಯಿಂದ ಪಂಚರತ್ನ ಕಾರ್ಯ ಕ್ರಮ ಮುಂದಿಟ್ಟು ಜನರ ಬಳಿ ಹೋಗಲಿದೆ. ನಾವೇ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ.
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ನಾಯಕ
ಚುನಾವಣೆಗಾಗಿ ಕಾರ್ಯಯೋಜನೆ ರೂಪಿಸಿದ್ದೇವೆ. ಪ್ರತೀ ತಿಂಗಳು 2 ಸಮಾವೇಶ ಗಳನ್ನು ಬೇರೆ ಬೇರೆ ಜಿÇÉೆಗಳಲ್ಲಿ ನಡೆಸಿ ನಮ್ಮ ಸಾಧನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ.
–