Breaking News

ರೈಲು ಢಿಕ್ಕಿ ಹೊಡೆದು 96 ಕುರಿಗಳ ದಾರುಣ ಸಾವು : ರೈಲು ಹಳಿ ದಾಟುವ ವೇಳೆ ಘಟನೆ

Spread the love

ಕೊಲ್ಹಾರ (ವಿಜಯಪುರ) : ಜಿಲ್ಲೆಯ ಕೊಲ್ಹಾರ ತಾಲೂಕಿಕ ಮಸೂತಿ-ಕೂಡಗಿ ಮಧ್ಯೆ ಗದಗ-ವಿಜಯಪೂರ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿಯಾಗಿ ಸುಮಾರು 96 ಕುರಿಗಳು ಸಾವನ್ನಪ್ಪಿರುವ ಘಟಣೆ ಜರುಗಿದೆ.

ಶನಿವಾರ ಸಂಜೆ ಸುರಿಯುತ್ತಿದ್ದ ಮಳೆ ಸಂದರ್ಭದಲ್ಲಿ ಸೇತುವೆ ಕೆಳಗಡೆ ಮಳೆಯಿಂದ ರಕ್ಷಣೆಗೆ ನಿಂತಿದ್ದ ಕುರಿಗಾರರು ಒಂದು ರೈಲು ಸಂಚರಿಸಿದ ಬಳಿಕ ಕುರಿಗಳನ್ನು ರೈಲ್ವೇ ಹಳಿ ದಾಟಿಸುವ ಸಂದರ್ಭದಲ್ಲಿ ಮತ್ತೊಂದು (ಗದಗ-ಮುಂಬೈ) ರೈಲು ಹಾಯ್ದು ಈ ದುರ್ಘಟನೆ ಸಂಭವಿಸಿದೆ.

 

ವೇಗವಾಗಿ ಚಲಿಸುತ್ತಿರುವ ರೈಲಿನ ರಬಸಕ್ಕೆ ಪೆಟ್ಟು ತಿಂದು ಕುರಿಗಳ ದೇಹಗಳು ಛಿದ್ರವಾಗಿದ್ದು, ರಕ್ತದ ಕೋಡಿ ಹರಿದಿದೆ.

ಸದರಿ ಘಟನೆಯಲ್ಲಿ ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಕುರಿಗಾರ ಶಿವಪ್ಪ ಕಲ್ಲಪ್ಪ ಮೂಕನ್ನವರ 25 ಕುರಿ, ಚಂದ್ರಪ್ಪ ಖರ್ಗೆ ಅವರಿಗೆ ಸೇರಿದ 43 ಮತ್ತು ಶೇಖಪ್ಪ ಮೂಕನವರ ಮತ್ತು ಮಲ್ಲಪ್ಪ ಕಾಡಸಿದ್ದ ಇವರಿಗೆ ಸೇರಿದ 28 ಕುರಿ ಸೇರಿದಂತೆ ಒಟ್ಟು 96 ಕುರಿಗಳು ರೈಲು ದುರಂತದಲ್ಲಿ ಸಾವನ್ನಪ್ಪಿವೆ.

ಸುದ್ದಿ ತಿಳಿಯುತ್ತಲೇ ಮಾಜಿ ಸಚಿವ ಸ್.ಕೆ. ಬೆಳ್ಳುಬ್ಬಿ, ಕೊಲ್ಹಾರ ತಹಶೀಲ್ದಾರ ಪಿ.ಜಿ.ಪವಾರ, ಕೂಡಗಿ ಪೊಲೀಸರು, ಸ್ಥಳಕ್ಕೆ ಧಾವಿವಿಸಿದ್ದಾರೆ.


Spread the love

About Laxminews 24x7

Check Also

ಖೋಟಾನೋಟು ಚಲಾವಣೆ: ನಾಲ್ವರ ಬಂಧನ

Spread the loveಖೋಟಾನೋಟು ಚಲಾವಣೆ: ನಾಲ್ವರ ಬಂಧನ : ವಿಜಯಪುರ ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ಕು ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ