Breaking News

ಬೇವರ್ಸಿ ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ’ : ವಿದ್ಯುತ್ ಕಂಬಕ್ಕೆ ಅಂಟಿಸಿದ ಪೋಸ್ಟ್ ವೈರಲ್!

Spread the love

ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕ್ಷೇತ್ರವಾದ ಮಲ್ಲೇಶ್ವರಂನಲ್ಲಿ ಬೇವರ್ಸಿ ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ ಎಂಬ ಪೋಸ್ಟರ್ ಅನ್ನು ವಿದ್ಯುತ್ ಕಂಬಕ್ಕೆ ಅಂಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಹಲವು ತಿಂಗಳಿನಿಂದ ಮಲ್ಲೇಶ್ವರಂನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆಗಳ ಸಂಪರ್ಕಕ್ಕೆ ಸಾಧ್ಯವಾಗದೆ ವಾಹನ ಸವಾರರು ಬೇಸತ್ತಿದ್ದಾರೆ. ಈ ರಸ್ತೆಯಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಶಾಪಿಂಗ್ ಗಾಗಿ ಬರುತ್ತಾರೆ. ಹೀಗಾಗಿ ಇಲ್ಲಿನ ರಸ್ತೆ ಕಾಮಗಾರಿ ಜನರಿಗೆ ಕಿರಿಕಿರಿ ಉಂಟು ಮಾಡಿದೆ.

ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು, ಮಳೆಯಿಂದಾಗಿ ನೀರು ತುಂಬಿ ರಸ್ತೆಗಳು ಕೆಸರಿನ ಗದ್ದಯಂತಾಗಿದೆ. ಹೀಗಾಗಿ ಜನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಯಾರೋ ವಿದ್ಯುತ್ ಕಂಬಕ್ಕೆ ಬೇವರ್ಸಿ ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ ಎಂಬ ಪೋಸ್ಟರ್ ಅಂಟಿಸಿದ್ದಾರೆ. ಸದ್ಯ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ವಿಜಯೇಂದ್ರ ವಿಡಿಯೋ ಕಾಲ್

Spread the loveಬೆಂಗಳೂರು: ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ  ನಡೆಯುತ್ತಿರುವ ಸಂದರ್ಭದಲ್ಲಿ ದುಬೈಯಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ