Breaking News

ಪವರ್‌ ಮ್ಯಾನ್‌ಗಳ ಸೇವೆಗೆ ಲಕ್ಷ್ಮಿ ತಾಯಿ ಫೌಂಡೇಷನ್‌ ವತಿಯಿಂದ ರೇನ್‌ ಕೋಟ್‌

Spread the love

ಬೆಳಗಾವಿ: ಅಪಾಯಕಾರಿ ಸನ್ನಿವೇಶಗಳಲ್ಲೂ ಜೀವದ ಹಂಗು ತೊರೆದು ಪರಿಶ್ರಮದಿಂದ ಕಾರ್ಯಾಚರಿಸಿ ಜನತೆಗೆ ಬೆಳಕು ನೀಡುವ ಪವರ್‌ ಮ್ಯಾನ್‌ ಗಳ ಸೇವೆ ಪ್ರಶಂಸನೀಯ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪೀರನವಾಡಿ ಸೆಕ್ಷನ್‌ 1, ಪೀರನವಾಡಿ ಸೆಕ್ಷನ್‌ 2, ಉಚಗಾಂವ ಹಾಗೂ ಹಿಂಡಲಗಾ ಈ ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುವ ಪವರ್‌ ಮ್ಯಾನ್‌ಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಲಕ್ಷ್ಮಿ ತಾಯಿ ಫೌಂಡೇಶನ್‌ ವತಿಯಿಂದ ಉತ್ತಮ ಗುಣಮಟ್ಟದ ರೇನ್‌ ಕೋಟ್‌ಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

 

ಈ ಮೊದಲು ಲೈನ್‌ ಮ್ಯಾನ್‌ ಎಂದು ಕರೆಯಲ್ಪಡುತ್ತಿದ್ದವರಿಗೆ ‘ಪವರ್‌ ಮ್ಯಾನ್‌’ ಎಂದು ಬಿರುದು ನೀಡಿದ ಶ್ರೇಯಸ್ಸು ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಡಿ.ಕೆ. ಶಿವಕುಮಾರ ಅವರು ಇಂಧನ ಸಚಿವರಾಗಿದ್ದಾಗ ಇಂಧನ ಖಾತೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಮಾಡಿದ್ದಾರೆ.

ಇದೀಗ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಅವರು ಪವರ್‌ ಮ್ಯಾನ್‌ ಗಳ ಸೇವೆಯ ಮಹತ್ವ ಪರಿಗಣಿಸಿ, ಮಳೆಗಾಲದಲ್ಲಿ ಸುರಕ್ಷಿತತೆ ಕ್ರಮವಾಗಿ ಲಕ್ಷ್ಮಿ ತಾಯಿ ಫೌಂಡೇಷನ್‌ ವತಿಯಿಂದ ರೇನ್‌ ಕೋಟ್‌ ಗಳನ್ನು ವಿತರಿಸಿದ್ದಾರೆ. ಇನ್ನೂ ಹೆಚ್ಚಿನ ಸೇವೆಗೆ ತಾವು ಸದಾ ಬದ್ಧ ಎಂದು ಹೇಳಿದರು.

ಮುಖಂಡರಾದ ಯುವರಾಜ ಕದಂ, ರಘುನಾಥ್‌ ಖಂಡೇಕರ್‌, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕ ಕಾಂಬಳೆ, ವಿಠuಲ ದೇಸಾಯಿ, ಗಜಾನನ ಕಾಕತಕರ ಜಯವಂತ ಬಾಳೇಕುಂದ್ರಿ, ಸುಧೀರ ಪಾಟೀಲ, ಆಯಾ ಭಾಗದ ಸೆಕ್ಷನ್‌ ಅ ಕಾರಿಗಳು ಹಾಗೂ ಹೆಸ್ಕಾಂ ವಿಭಾಗದ ಮೇಲಧಿಕಾರಿಗಳು ಇದ್ದರು.


Spread the love

About Laxminews 24x7

Check Also

ಪರೀಕ್ಷೆ ಬರೆದ 11ದಿನದಲ್ಲಿ ಪ್ರಕಟಗೊಂಡಿದೆ ಫಲಿತಾಂಶ

Spread the love ಬೆಳಗಾವಿ: ಆರ್‌ಪಿಡಿ ಕಾಲೇಜು, ಚೆನ್ನಮ್ಮ ವಿವಿಯಿಂದ ಸ್ಪಾಯತ್ತತೆ, ಮೊದಲ ಫಲಿತಾಂಶ ಬೆಳಗಾವಿ : ಇಲ್ಲಿನ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ