ವಿಜಯಪುರ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾದ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬುಧವಾರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಜರುಗಿದೆ.
ಮಕ್ಕಳನ್ನು ಮೊದಲು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿಯನ್ನು ಆರು ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ (32) ಎಂದು ಗುರುತಿಸಲಾಗಿದೆ.
1 ಹಾಗೂ 3 ವರ್ಷದ ಮಕ್ಕಳು ತಾಯಿಯಿಂದ ಜೀವ ಕಳೆದುಕೊಂಡ ನತದೃಷ್ಟರು.
ದುರಂತಕ್ಕೆ ಕಾರಣವಾದ ಮಹಿಳೆಯ ಪತಿ ಶ್ರೀಶೈಲ ಕುರಿ ಕಾಯಲು ಹೋಗಿದ್ದ ವೇಳೆ ಇಬ್ಬರು ಮಕ್ಕಳೊಂದಿಗೆ ಬಾವಿಗೆ ತೆರಳಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Laxmi News 24×7