ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ನೀತಿಶ ಪಾಟೀಲ ಕಾಗವಾಡ ತಾಲೂಕಿನ ಮಂಗಾವತಿ-ಜುಗೂಳ ಗ್ರಾಮಗಳಿಗೆ ಭೇಟಿ ನೀಡಿ ಕೃμÁ್ಣ ನದಿಯ ಪ್ರವಾಹ ಸ್ಥಿತಿಗತಿ ಆಲಿಸಲು ಬಂದಾಗ ಜನರ ಸಮಸ್ಯೆಗಳನ್ನು ಆಲಿಸದೆ, ಕಾರಿನಿಂದ ಕೆಳಗೆ ಇಳಿಯದೆ ಮನವಿ ಸ್ವೀಕರಿಸಿ ಹೋಗಿದ್ದರಿಂದ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಬುಧವಾರ ಮಧ್ಯಹ್ನ ಜಿಲ್ಲಾಧಿಕಾರಿಗಳಾದ ನೀತಿಶ ಪಾಟೀಲ್ ಕಾಗವಾಡ ತಾಲೂಕಿನ ಜುಗುಳು ಮತ್ತು ಮಂಗಾವತಿ ಗ್ರಾಮೀಣ ಭೇಟಿ ನೀಡಿ ಇಲಿಯ ನೀರಿನ ಸ್ಥಿತಿಗತಿ ಆಲಿಸಲು ಬಂದ್ದಿದರು. ಆದರೆ ಅವರು ಬಂದಿರುವ ಉದ್ದೇಶ ನದಿ ತೀರದ ಜನರಿಗೆ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವುದಾಗಿತು. ಅವರು ಬಂದಿದ್ದ ಕಾರಿನಲ್ಲಿ ಕೆಳಗೆ ಇಳಿಯದೇ ಜನರ ಅಹವಾಲ ಸ್ವೀಕರಿಸಿದರು. ಬಹಳಷ್ಟು ಸಮಸ್ಯೆಗಳು ಹೇಳಿಕೋಳವರಿದ್ದರು, ಆದರೆ ಅಧಿಕಾರಿ ಗಾಡಿಯಿಂದ ಕೆಳಗೆ ಬಾರದೆ ಕೆಲ ಮಾತನಾಡಿ ನೇರವಾಗಿ ಬಂದರು ಹೋದರು.
ಜುಗುಳ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಡಿ.ಕೆ.ಎಸ್.ಎಸ್ ಸಕ್ಕರೆ ಕಾರ್ಖಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಹೇಳುವಾಗ ಕಳೆದ ವರ್ಷದ ಮಹಾಪೂರ ನೀರಿನಲ್ಲಿ ಮನೆಗಳು ಮುಳುಗಡೆಯಾಗಿದ್ದವು, ರಾಜ್ಯ ಸರ್ಕಾರ ಪ್ರತಿ ಒಂದು ಮನೆಗೆ 10 ಸಾವಿರ ರೂ. ಪರಿಹಾರ ಹಣ ನೀಡಿದರು. ಅದರಲ್ಲಿ ಇವರಿಗೆ 1100 ಕುಟುಂಬಗಳಿಗೆ ಈ ಹಣ ತಲುಪಿಲ್ಲ. ಇದನ್ನು ಮೋದಲು ನೀಡಿರಿ. ಅನೇಕ ಜನರ ಮನೆಗಳ ಸಮಸ್ಯೆ ಈವರೆಗೆ ನೀವಾರಿಸಿಲ್ಲಾ.