Breaking News

ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

Spread the love

ತಿರುವನಂತಪುರ (ಕೇರಳ): ‘ಅದೃಷ್ಟ ಹುಡುಕುವವರಿಗೆ ಸಿಹಿಸುದ್ದಿ! ಈ ಓಣಂಗೆ ನಮ್ಮಲ್ಲಿಗೆ ಬನ್ನಿ, ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಅತಿದೊಡ್ಡ ಜಾಕ್‌ಪಾಟ್ ಗೆಲ್ಲಿ, 25 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಿ…’

– ಹೀಗೆ ಎನ್ನುತ್ತಿದೆ ಕೇರಳ ಸರ್ಕಾರ. ಈ ಮೊದಲು ಗಲ್ಫ್​ ರಾಷ್ಟ್ರಗಳಿಂದ ಹಣದ ಹೊಳೆಯೇ ಕೇರಳಕ್ಕೆ ಹರಿದುಬರುತ್ತಿತ್ತು. ಆದರೆ ಕರೊನಾದಿಂದಾಗಿ 10 ಲಕ್ಷಕ್ಕೂ ಅಧಿಕ ಮಂದಿ ಕೇರಳಿಗರು ಉದ್ಯೋಗ ಕಳೆದುಕೊಂಡು ಗಲ್ಫ್​ ರಾಷ್ಟ್ರಗಳಿಂದ ತಾಯ್ನಾಡಿಗೆ ವಾಪಸಾಗಿದೆ. ಅದರ ನಡುವೆ ಕರೊನಾದಿಂದಾಗಿ ಪ್ರವಾಸೋದ್ಯಮಕ್ಕೂ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳಲು ಅನ್ಯಮಾರ್ಗ ಹುಡುಕುತ್ತಿರುವ ಕೇರಳದ ಕಮ್ಯುನಿಸ್ಟ್​ ಸರ್ಕಾರ ಲಾಟರಿಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಅತಿದೊಡ್ಡ ಲಾಟರಿ ಯೋಜನೆಯನ್ನು ಹಮ್ಮಿಕೊಂಡಿದೆ.

ಲಾಟರಿಯಿಂದಾಗಿ ಹಲವಾರು ಮಂದಿ ಬೀದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಲಾಟರಿಯನ್ನು ಬ್ಯಾನ್​ ಮಾಡಿವೆ. ಆದರೆ ಕೇರಳದಲ್ಲಿ ಲಾಟರಿ ಬ್ಯಾನ್​ ಆಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಲಾಟರಿ ಇಲಾಖೆಯು ಓಣಂ ಬಂಪರ್ ಲಾಟರಿ 2022 ಕ್ಕೆ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ, ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿ, ದ್ವಿತೀಯ ಬಹುಮಾನ 5 ಕೋಟಿ ಹಾಗೂ 10 ತೃತೀಯ ಬಹುಮಾನ ತಲಾ 1 ಕೋಟಿ ರೂಪಾಯಿಗಳ ಲಾಟರಿ ಯೋಜನೆ ಇದಾಗಿದೆ. ಇದು ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ. 2019 ರಿಂದ ಮೊದಲ ಬಹುಮಾನವಾಗಿ 12 ಕೋಟಿ ರೂ.ಗಳನ್ನು ನೀಡುತ್ತ ಬರಲಾಗಿದ್ದು, ಇದೀಗ ಈ ಮೊತ್ತವನ್ನು 25 ಕೋಟಿ ರೂಪಾಯಿಗೆ ಏರಿಸಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ