ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪುರಸಭೆ ಕಾರ್ಯಾಲಯ ಆವರಣದಲ್ಲಿ ಪೌರ ಕಾರ್ಮಿಕರು ಧರಣಿ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘ ಬೆಂಗಳೂರು ಚಿಕ್ಕೋಡಿ ಶಾಖೆ ಪೌರ ಕಾರ್ಮಿಕರ ವಿಶೇಷ ನೇರ ನೇಮಕಾತಿ ವಿಳಂಬ ಖಂಡಿಸಿ ಅನಿರ್ದಿಷ್ಟ ಅವಧಿಯವರೆಗೂ ಮುಸ್ಕರ ನಡೆಸಿದ್ದಾರೆ. ಸುಮಾರು ಹತ್ತು ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಗೊಳಿಸಬೇಕು, ಹಾಗೂ ಪೌರಕಾರ್ಮಿಕರು ಕೆಲಸದಲ್ಲಿ ಮರಣ ಹೊಂದಿದಲ್ಲಿ ಅವರ ಮನೆಯವರಿಗೆ ಕೆಲಸಕ್ಕೆ ನೇಮಿಕ ಮಾಡಿಕೊಳ್ಳಬೇಕು ಎಂದು ಹೋರಾಟ ಕೈಗೊಂಡಿದ್ದಾರೆ.
ಈ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರು ಭಾಗವಹಿಸಿ ಪೌರ ಕಾರ್ಮಿಕರಿಗೆ ಸಾಥ್ ನೀಡಿದ್ದಾರೆ. ನಂತರ ಪುರಸಭೆ ಸದಸ್ಯರ ಸಾಬೀರ್ ಜಮಾದಾರ ಅವರು ಮಾತನಾಡಿ ಪಟ್ಟಣವನ್ನು ಸ್ವಚ್ಛ ಸುಂದರವನ್ನಾಗಿ ಕಾಣಲು ಈ ಪೌರ ಕಾರ್ಮಿಕರೇ ಕಾರಣ ಅವರ ಬೆನ್ನಿಗೆ ನಾವಿದ್ದೇವೆ. ಮಾನ್ಯ ಪ್ರಧಾನಿಯವರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಹೆಸರು ಗಿಟ್ಟಿಸಿಕೊಳ್ಳವುದು ಅಷ್ಟೇ ಅಲ್ಲ ಅವರ ಕಷ್ಟಗಳಿಗೆ ಸ್ಪಂದಿಸಿ ಅವರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದರು.
ಆ ನಂತರ ಕಾಂಗ್ರೆಸ್ ಮುಖಂಡ ವಿನೋದ್ ಮಾಳಗೆ ಅವರು ಮಾತನಾಡಿ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ. ಒಂದು ವೇಳೆ ಇವರ ಹೋರಾಟಕ್ಕೆ ಸ್ಪಂದಿಸದೆ ಇದ್ದರೆ ಮುಂದೆ ವಿಧಾನ ಸೌಧ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರಾದ ಸಾಬೀರ ಜಮಾದಾರ ರಾಮಾ ಮಾನೆ, ವಿನೋದ ಮಾಳಗೆ, ಶ್ರೀಮಂತ ಮಾಳಗೆ, ಅನಿಲ ಮಾನೆ, ಇರ್ಫಾನ್ ಬೆಪಾರಿ, ಮುದಸರ ಜಮಾದಾರ ಸೇರಿದಂತೆ ಚಿಕ್ಕೋಡಿ ಪೌರ ಕಾರ್ಮಿಕರು ಭಾಗವಹಿಸಿದ್ದರು.