ಧಾರವಾಡ: ಕಾರು ಚಲಾಯಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದು, ಕಾರು ಹೊಲಕ್ಕೆ ನುಗ್ಗಿ ನಿಂತಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕರ್ಲವಾಡ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಇಂಜಿನಿಯರ್, ನವಲಗುಂದ ತಾಲೂಕಿನ ಲೋಕನಾಥ್ ಗುತ್ತಲ್ (29) ಸಾವಿಗೀಡಾಗಿದ್ದಾರೆ.
ಇವರು ಕರ್ತವ್ಯದ ಮೇಲೆ ಹುಬ್ಬಳ್ಳಿಯಿಂದ ನವಲಗುಂದಗೆ ಹೊರಟಿದ್ದರು. ಮಾರ್ಗಮಧ್ಯೆ ಹೃದಯಾಘಾತಕ್ಕೀಡಾಗಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದೆ. ಇಂಜಿನಿಯರ್ ಕಾರಿನಲ್ಲೇ ಸಾವಿಗೀಡಾಗಿದ್ದರು. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7