ಬಾಗಲಕೋಟೆ: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು. ಉತ್ಸವ, ಭಂಡಾರ, ಕೇಸರಿ ಹಚ್ಚಿಕೊಳ್ಳೋದು ಅಂದ್ರೆ ಅವರಿಗೆ ಅಲರ್ಜಿ ಆಗುತ್ತದೆ. ಅದೇ ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ ಆಗುತ್ತದೆ. ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದರು
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದ್ಯಾವ ಉತ್ಸವರಿ, ಇದು ಕೊನೆಯದ್ದು, ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವ ಎಂದು ಲೇವಡಿ ಮಾಡಿದರು. ರಾಜ ಮಹಾರಾಜರು ವಾನಪ್ರಸ್ಥಾಶ್ರಮಕ್ಕೆ ಹೋಗುತ್ತಿದ್ದರು. ಇಂತಿಷ್ಟು ವರ್ಷ ಆದಮೇಲೆ ರಾಣಿಯರನ್ನ ಕರೆದುಕೊಂಡು ಅಡವಿಗೆ ಹೋಗುತ್ತಿದ್ದರು. ಹಾಗೆಯೇ ಸಿದ್ದರಾಮೋತ್ಸವ ಮೂಲಕ ನಮ್ಮ ಡಿಕೆಶಿಯನ್ನ ಅರಣ್ಯಕ್ಕೆ ಕಳಿಸೋ ಪ್ರೋಗ್ರಾಮ್ ಆಗಿದೆ. ಇಡೀ ಕಾಂಗ್ರೆಸ್ ಈಗ ಅರಣ್ಯಕ್ಕೆ ಹೋಗುತ್ತೆ, ರಾಹುಲ್ ಗಾಂಧಿಯಂತ ವ್ಯಕ್ತಿ ನೇತೃತ್ವ ಇರೋವಾಗ ಕಾಂಗ್ರೆಸ್ ಇಟಲಿಗೆ ಹೋಗುತ್ತದೆ ಎಂದು ಟೀಕಿಸಿದರು.
Laxmi News 24×7