Breaking News

ಯುವತಿಯ ಸೌಂದರ್ಯಕ್ಕೆ ಸೋತು ಬೆತ್ತಲಾದವನಿಗೆ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ

Spread the love

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹೆಣಗಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.

 

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ ಚಾಟಿಂಗ್​ ಆರಂಭಿಸಿದ್ದಾನೆ. ವಿಡಿಯೋ ಕಾಲ್​ ಸಹ ಮಾಡಿದ್ದಾನೆ.

ಇಬ್ಬರ ನಡುವೆ ತುಂಬಾ ಸಲುಗೆ ಬೆಳೆದಾಗ ಯುವತಿಯೊಂದಿಗೆ ಸಂತ್ರಸ್ತ ವ್ಯಕ್ತಿ ಅಶ್ಲೀಲ ವಿಡಿಯೋ ಕಾಲ್​ ಸಹ ಮಾಡಿದ್ದಾನೆ. ಆದರೆ, ಆಕೆ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿರುವುದು ಆತನಿಗೆ ಗೊತ್ತೇ ಇಲ್ಲ. ಯುವತಿಯ ಸೌಂದರ್ಯಕ್ಕೆ ಮರುಳಾಗಿ ಬೆತ್ತಲಾದ ಸಂತ್ರಸ್ತನಿಗೆ ನಂತರ ಎದುರಾಗಿದ್ದು, ಸಂಕಷ್ಟಗಳ ಸರಮಾಲೆ.

ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದ ಯುವತಿ, ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಸಾಕಷ್ಟು ಹಣ ನೀಡಿದ್ದ ಸಂತ್ರಸ್ತ ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಜೊತೆಗಿದ್ದ ಸೈಬರ್​ ಖದೀಮರು ಹಿಡಿದಿದ್ದು ಮಾತ್ರ ಬೇರೆ ದಾರಿ. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವಿಗೀಡಾಗಿದ್ದಾಳೆ ಅನ್ನೋ ಕತೆ ಕಟ್ಟಿದರು.

ಯುವತಿಯ ಸಾವಿಗೆ ನೀನೆ ಕಾರಣ ಅಂತ ಕರೆ ಮಾಡಲು ಆರಂಭಿಸಿದರು. ಅಲ್ಲದೆ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಅಂತಾ ಸುಳ್ಳು ಹೇಳಿದರು. ಗೂಗಲ್​ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿ, ಅದನ್ನು ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ ಸಂತ್ರಸ್ತನಿಂದ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ ಮಾಡಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ