Breaking News

ಶ್ರೀಲಂಕಾ ಅಧ್ಯಕ್ಷರ ಬಂಗಲೆಗೆ ಮುತ್ತಿಗೆ ಹಿಂಸಾಚಾರಕ್ಕೆ ತಿರುಗಿದ ರಾವಣ ರಾಷ್ಟ್ರ

Spread the love

ಶ್ರೀಲಂಕಾ ಕಳೆದ 4 ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟನ್ನ ಎದುರಿಸುತ್ತಿದೆ, ಆಹಾರಕ್ಕಾಗಿ ಜನ ತತ್ತರಗೊಂಡಿದ್ದಾರೆ. ಜನ ಸಾಮಾನ್ಯ ವಸತಿಗಾಗಿ ಸಾವಿರಾರು ರೂಗಳನ್ನ ತೆತ್ತಲು ಅವರ ಬಳಿ ಹಣ ಇಲ್ಲದೆ ನೆರೆ ದೇಶಗಳಿಗೆ ನಡೆದು ಆ ದೇಶಗಳ ಪೋಲಿಸರ ಅತಿಥಿಗಳಾಗಿದ್ದಾರೆ , ನೆರೆ ದೇಶಗಳು ಸಾವಿರಾರು ಕೋಟಿ ಹಣ ಸಹಾಯ ಮಾಡಿದರು ಶ್ರೀಲಂಕಾ ಇನ್ನೂ ಸರಿದಾರಿ ತರುವಲ್ಲಿ ಏಡವಿದ್ದಾರು ಎಲ್ಲಿ ಎಂದು ಈಗ ಜನ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ , ಮುಖ್ಯವಾಗಿ ರಾಜಕಾರಣಿಗಳ ಏಡಬಿಡಂಗಿತನ ಇವತ್ತು ಶ್ರೀಲಂಕಾ ನ ಬೀದಿಗೆ ತಂದು ನಿಲ್ಲಿಸಿದೆ.

ಓಡಾಡಲು ಪೆಟ್ರೋಲಿಯಂ ಇಲ್ಲ ಕಳೆದ ವರದಿಗಳನ್ನ ನೋಡಿದರೆ ಮೆನ್ನೆ ಬಾರತದ ತೆಮಿಳುನಾಡಿನ ಪೆಟ್ರೋಲ ಬಂಕ್‌ ಗಳಲ್ಲಿ ಶ್ರೀಲಂಕಾದ 100 ವಿಮಾನಗಳಿಗೆ ಪೆಟ್ರೋಲ್‌ ತುಂಬಿಸಿಕೊಂಡದ್ದನ್ನ ನಾವು ನೋಡಿದ್ದೆವೆ, ಜನ ಸಾಮಾನ್ಯರು ಆನೇಕರು ಸಾವಿನ ದವಡೆಗೆ ಬಂದು ನಿಂತಿದ್ದಾರೆ
ಒಂದೆಡೆ ಜನ ಪ್ರತಿಭಟನೆಗಳ ಮೂಲಕ ಅನ್ನ ಆಹಾರಗಳಿಲ್ಲದೆ ಗುಂಡೇಟಿನ ನಡುವೆ ನಲುಗುತ್ತಿದ್ದರೆ ಇದ್ಯಾವುದರ ಪರಿವೆ ಇಲ್ಲದೆ ಶ್ರೀಲಂಕಾದ ಅಧ್ಯಕ್ಷ ರಾಜಪಕ್ಷೆ ತನ್ನ ಸರುಕ ಸರಂಜಾಮು ಗಳೊಂದಿಗೆ ಹಡಗಿನಲ್ಲಿ ಪಲಾಯನಗೈದಿದ್ದಾನೆ ಇದು ಈ ದೇಶದ ದುರಂತವೇ ಸರಿ,

ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿವಾಸಕ್ಕೆ ಪ್ರವೇಶಿಸಿದರು.
ಹೆಲ್ಮೆಟ್ ಧರಿಸಿ ಶ್ರೀಲಂಕಾ ಧ್ವಜಗಳನ್ನು ಬೀಸುತ್ತಿದ್ದ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದಾರೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಶ್ರೀಲಂಕಾದ ಅಧ್ಯಕ್ಷರ ಅಧಿಕೃತ ನಿವಾಸವು ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಅವರ ರಾಜೀನಾಮೆಗೆ ಒತ್ತಾಯಿಸಿ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಕಚೇರಿಯನ್ನು ಸುತ್ತುವರೆದರು. ವಿರೋಧ ಪಕ್ಷಗಳು ಸವಾಲು ಹಾಕಿದ ನಂತರ ಪೊಲೀಸರು ಕರ್ಫ್ಯೂವನ್ನು ಹಿಂಪಡೆದರು. ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು. ಅವರು ಭದ್ರತಾ ಪಡೆಗಳ ಬ್ಯಾರಿಕೇಡ್ ಗಳನ್ನು ದಾಟಿ ಪ್ರವೇಶಿಸಿದರು. ಇದರ ವೀಡಿಯೊಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಸ್ವಲ್ಪ ಸಮಯದ ನಂತರ, ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಬಂದವು.

ಶ್ರೀಲಂಕಾದ 22 ಲಕ್ಷ ಜನರು ತೀವ್ರ ಸಂಕಷ್ಟದಲ್ಲಿರುವುದರಿಂದ ಗೋಟಬಯಾ ರಾಜಪಕ್ಸೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಶ್ರೀಲಂಕಾದವರು ಒತ್ತಾಯಿಸುತ್ತಿದ್ದಾರೆ. ರಾಜಧಾನಿ ಕೊಲಂಬೋದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಲು ಹಮ್ಮಿಕೊಂಡಿದ್ದರು. ಯೋಜನೆಯಂತೆ ಸಾವಿರಾರು ಜನರು ಶುಕ್ರವಾರ ರಾತ್ರಿಯೇ ಕೊಲಂಬೋಗೆ ಆಗಮಿಸಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸುವೆ. ಆದರೆ ಈ ದೇಶದ ಜನರ ಸಂಕಷ್ಟ ವನ್ನ ಸರಿದಾರಿಗೆ ಯಾರು ತರುತ್ತಾರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.


Spread the love

About Laxminews 24x7

Check Also

NCP ಬಣಗಳ ವಿಲೀನ ನಿರ್ಧಾರವನ್ನ ಅಜಿತ್‌ ಪವಾರ್‌ ಫೆ.12ಕ್ಕೆ ಪ್ರಕಟಿಸಬೇಕಿತ್ತು: ಶರದ್ ಪವಾರ್

Spread the loveಮುಂಬೈ: ಕಳೆದ ನಾಲ್ಕು ತಿಂಗಳಿಂದ ಎನ್‌ಸಿಪಿ  ಎರಡು ಬಣಗಳ ವಿಲೀನ ಬಗ್ಗೆ ಮಾತುಕತೆ ನಡೆದಿತ್ತು ಎಂದು ಎನ್‌ಸಿಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ